ಉಪ್ಪಳ ಅಗ್ನಿಶಾಮಕದಳಕ್ಕೆ ಪ್ರತಾಪನಗರದಲ್ಲಿ ನೂತನ ಕಟ್ಟಡ ನಿರ್ಮಾಣ

ಉಪ್ಪಳ: ಕಳೆದ 15 ವರ್ಷಗಳಿಂದ ಚೆರುಗೋಳಿ ರಸ್ತೆಯ ಪಂಚಾಯತ್ ಕಟ್ಟಡದಲ್ಲಿ ಕಾಯÁðಚರಿಸುತ್ತಿರುವ ಉಪ್ಪಳ ಅಗ್ನಿಶಾಮಕ ದಳಕ್ಕೆ ಮಂಗಲ್ಪಾಡಿ ಪಂಚಾಯತ್‌ನ ಪ್ರತಾಪನಗರದ 7ನೇ ವಾರ್ಡ್ ಗುಳಿಗ ಬನದ ಪರಿಸರದಲ್ಲಿ ನೂತನ ಕಟ್ಟಡ ನಿರ್ಮಾಣಗೊಳ್ಳುತ್ತಿದೆ. ಕಳೆದ ಒಂದು ತಿಂಗಳ ಹಿಂದೆ ಕಾಮಗಾರಿ ಆರಂಭಗೊAಡಿದ್ದು, ಕಟ್ಟಡ ನಿರ್ಮಾಣ ಕೆಲಸಗಳು ನಡೆಯುತ್ತಿದೆ. ಪ್ರಸ್ತುತ ಇರುವ ಕಟ್ಟಡದಲ್ಲಿ ಸೌಕರ್ಯದ ಕೊರತೆ ಉಂಟಾಗಿದ್ದು, ಇದರಿಂದ ಅಧಿಕಾರಿಗಳು ಸಂಕಷ್ಟಕ್ಕೀಡಾಗಿದ್ದಾರೆ. ನಿರ್ಮಾಣ ಗೊಳ್ಳುತ್ತಿರುವ ಎರಡು ಹಂತಸ್ತಿನ ಕಟ್ಟಡದಲ್ಲಿ ಕಚೇರಿ, ಶೆಡ್ಡ್, ಗ್ಯಾರೇಜ್, ವಿಶ್ರಾಂತಿ ಕೊಠಡಿ ಮೊದಲಾದ ಸೌಕರ್ಯಗಳÀÄ ಹೊಂದಿದ್ದು, ಶೀಘ್ರದಲ್ಲಿ ಕಟ್ಟಡ ಕಾಮಗಾರಿ ಪೂರ್ತಿಗೊಳ್ಳಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

You cannot copy contents of this page