ಮಾದಕ ದ್ರವ್ಯ ಪ್ರಕರಣದಲ್ಲಿ ಸಿಲುಕಿರುವವರ ಯಾದಿ ತಯಾರಿಸಲು ಪೊಲೀಸ್ ಇಲಾಖೆ ತೀರ್ಮಾನ

ಕಾಸರಗೋಡು: ರಾಜ್ಯದಲ್ಲಿ ಅಮಲು ಪದಾರ್ಥ ಸೇವನೆಗೆ ಸಂಬಂಧಿಸಿದ ಪ್ರಕರಣಗಳಲ್ಲಿ ಸಿಲುಕಿಕೊಂಡಿರುವವರ ಯಾದಿ ತಯಾರಿಸಲು ಪೊಲೀಸ್ ಇಲಾಖೆ ಮುಂದಾಗಿದೆ. ಜನಮೈತ್ರಿ ಪೊಲೀಸರು ಈ ಯಾದಿ ತಯಾರಿಸುವ ಕೆಲಸದಲ್ಲಿ ಈಗಾಗಲೇ ತೊಡಗಿದ್ದಾರೆ. ಹೀಗೆ ಮಾದಕದ್ರವ್ಯ ಸೇವನೆ ವೇಳೆ ಸಿಲುಕಿಕೊಂಡಿ ರುವವರ ಈಗಿನ ಸ್ಥಿತಿಯನ್ನು ಪರಿಶೀಲಿಸಿ ಅಗತ್ಯವೆನಿಸಿದ್ದಲ್ಲಿ ಅವರನ್ನು ಕೌನ್ಸಿಲಿಂಗ್‌ಗೊಳಪಡಿಸಲು ಪೊಲೀಸ್ ಇಲಾಖೆ ತೀರ್ಮಾನಿಸಿದೆ. ರಾಜ್ಯದಲ್ಲಿ ಎಲ್ಲಾ ಪೊಲೀಸ್ ಠಾಣೆಗಳ ಜನಮೈತ್ರಿ ಪೊಲೀಸ್ ವಿಭಾಗಕ್ಕೆ ಇದರ ಹೊಣೆಗಾರಿಕೆ ವಹಿಸಿಕೊಡಲಾಗಿದೆ.

ವಿಶೇಷವಾಗಿ 21ಕ್ಕಿಂತ ಕೆಳ ಪ್ರಾಯದ ಅಮಲು ಪದಾರ್ಥ ವ್ಯಸನಿಗಳ ಯಾದಿಯನ್ನು ಇದರಂತೆ ತಯಾರಿಸಲಾಗುವುದು.

RELATED NEWS

You cannot copy contents of this page