ರಾಜ್ಯ ಸರಕಾರದ  ನಾಲ್ಕನೇ ವಾರ್ಷಿಕಾಚರಣೆ : ಕಾಸರಗೋಡಿನ ತುಳು ಸಂಸ್ಕೃತಿ ಉಪನ್ಯಾಸ

ಮಂಜೇಶ್ವರ: ಪಿಣರಾಯಿ ವಿಜಯನ್‌ರ ನೇತೃತ್ವದ ದ್ವಿತೀಯ ಅವಧಿಯ ಸರಕಾರದ ನಾಲ್ಕನೇ ವಾರ್ಷಿಕದಂಗವಾಗಿ  ಈ ತಿಂಗಳ 21ರಿಂದ ನಡೆಯುವ ಪ್ರದರ್ಶನ ಮಾರಾಟ ಮೇಳದಂಗವಾಗಿ ಮಂಜೇಶ್ವರ ಗೋವಿಂದ ಪೈ ಎನ್‌ಎಸ್‌ಎಸ್ ಘಟ ಕದ ಸಹಕಾರದೊಂದಿಗೆ ಕಾಸರಗೋಡು ತುಳು ಸಂಸ್ಕೃತಿ ಎಂಬ ವಿಷಯದಲ್ಲಿ ಉಪನ್ಯಾಸ ನಡೆಸಲಾಯಿತು. ತುಳು ಅಕಾಡೆಮಿ ಅಧ್ಯಕ್ಷ ಕೆ.ಆರ್. ಜಯಾ ನಂದ ಉದ್ಘಾಟಿಸಿ ಮಾತನಾಡಿದರು. ಕೃಷಿ ಸಂಸ್ಕೃತಿಯಾಗಿದೆ ತುಳುನಾಡಿನ ಗ್ರಾಮಗಳ ಅಡಿಪಾಯ ಎಂದು ಅವರು ನುಡಿದರು. ನಾಗಾರಾಧನೆ, ದೈವಾರಾಧನೆ, ಕಂಬಳ ಈ ನಾಡಿನ ಸಂಸ್ಕೃತಿಯ ಭಾಗವೆಂದು ಅವರು ನುಡಿದರು.

ಹಲವು ಭಾಷೆಗಳನ್ನು ಮಾತನಾಡುವ ವ್ಯಕ್ತಿಗಳಿರುವ ಊರಾಗಿದೆ ನಮ್ಮದು. ಭಾಷೆಗಳ ಮಧ್ಯೆ ಉತ್ತಮ ಸಾಹೋದರ್ಯತೆ ಗಟ್ಟಿಗೊಳಿಸಲು ಐಕ್ಯದಿಂದ ಮುಂದೆ ಸಾಗಲು ನಮಗೆ ಸಾಧ್ಯವಾಗಬೇ ಕೆಂದು ರಾಧಾಕೃಷ್ಣ ಉಳಿಯತ್ತಡ್ಕ ನುಡಿದರು. ತುಳುನಾಡಿನ ರುಚಿಗಳು, ಆಚರಣೆಗಳು, ಕೃಷಿ ಸಂಸ್ಕೃತಿ ಸಹಿತ ವಿವಿಧ ವಲಯಗಳ ಬಗ್ಗೆ ಮಾತುಕತೆ ಜರಗಿತು. ಕಾಲೇಜಿನ ಪ್ರಾಂಶುಪಾಲ ಡಾ. ಮುಹಮ್ಮದ್ ಅಲಿ ಕೆ ಅಧ್ಯಕ್ಷತೆ ವಹಿಸಿದರು. ಸೀನಿಯರ್ ಸುಪರಿನ್ ಟೆಂಡೆಂಟ್ ಕೆ.ಎಸ್. ದಿನೇಶ ಮಾತನಾಡಿದರು.  ಜಿಲ್ಲಾ ಇನ್ಫರ್ಮೇಶನ್ ಆಫೀಸ್ ಅಸಿಸ್ಟೆಂಟ್ ಎಡಿಟರ್ ಎ.ಪಿ. ದಿಲ್ನಾ ಸ್ವಾಗತಿಸಿ, ಎನ್‌ಎಸ್‌ಎಸ್ ಘಟಕ ಕಾರ್ಯದರ್ಶಿ ಕೆ. ಅಮೃತ ವಂದಿಸಿದರು.

RELATED NEWS

You cannot copy contents of this page