ಐಲ ಕ್ಷೇತ್ರದಲ್ಲಿ ಸಾರ್ವಜನಿಕ ಬೆಡಿ ಉತ್ಸವ, ವಿರಾಟ್ ನೃತ್ಯ ಭಜನಾ ಸಂಭ್ರಮ ಇಂದು

ಉಪ್ಪಳ: ಐಲ ಶ್ರೀ ದುರ್ಗಾಪರ ಮೇಶ್ವರೀ ದೇವಸ್ಥಾನದಲ್ಲಿ ನಡೆಯುತ್ತಿರುವ ವಿಷು ಜಾತ್ರೆ ಪ್ರಯುಕ್ತ ಇಂದು ರಾತ್ರಿ 10ರಿಂದ ಐಲ ಮೈದಾನದಲ್ಲಿ ಸಾರ್ವಜನಿಕ ಬೇಡಿ ಉತ್ಸವ ಹಾಗೂ ವಿವಿಧ ಕುಣಿತ ಭಜನಾ ತಂಡಗಳಿAದ ‘ವಿರಾಟ್ ನೃತ್ಯ ಭಜನಾ ಸಂಭ್ರಮ’ ವಿಶೇಷ ಕಾರ್ಯಕ್ರಮ ನಡೆಯಲಿದೆ. 10.30ರಿಂದ ಶಿವಾಜಿ ಫ್ರೆಂಡ್ಸ್ ಶಿವಾಜಿನಗರ ಐಲ ಕಡಪ್ಪರ ಇದರ 22ನೇ ವಾರ್ಷಿಕ ಸಂಭ್ರಮದAಗವಾಗಿ ವಿಜಯ ಕುಮಾರ್ ಕೋಡಿಯಾಲ್‌ಬೈಲ್ ನಿರ್ಧೇಶನದಲ್ಲಿ ‘ಛತ್ರಪತಿ ಶಿವಾಜಿ’ ನಾಟಕ ಪ್ರದರ್ಶನ, ನಾಳೆ ಸಂಜೆ 4ರಿಂದ ಆರಾಟೋತ್ಸವ, ರಾಜಾಂಗಣ ಪ್ರಸಾದ, ಕುಬಣೂರು ಶ್ರೀ ಶಾಸ್ತಾವು ಕ್ಷೇತ್ರಕ್ಕೆ ಅವಭೃತ ಸ್ನಾನಕ್ಕಾಗಿ ದೇವರ ಶೋಭಾಯಾತ್ರೆ, ಸಾಂಸ್ಕöÈತಿಕ ಕಾರ್ಯಕ್ರಮದಂಗವಾಗಿ ತರುಣ ಕಲಾವೃಂದ ಐಲ ಇದರ 57ನೇ ವಾರ್ಷಿಕೋತ್ಸವದಂಗವಾಗಿ ರಾತ್ರಿ 7.30ರಿಂದ ‘ದೈವರಾಜೆ ಶ್ರೀ ಬಬ್ಬು ಸ್ವಾಮಿ’ ತುಳು ನಾಟಕ, 10ರಿಂದ ಧ್ವಜಾವರೋಹಣ, ನವಕ ಕಲಶ, ಸಂಪ್ರೋಕ್ಷಣೆ ನಡೆಯಲಿದೆ. 18ರಂದು ಸಂಜೆ 5ರಿಂದ ಶ್ರೀ ವ್ಯಾಘ್ರ ಚಾಮುಂಡಿ ದೈವದ ನೇಮೋತ್ಸವ ನಡೆಯಲಿದೆ.

You cannot copy contents of this page