ಚು. ಸಾ.ಪ. ದ.ಕ ಜಿಲ್ಲಾ ಘಟಕ ಉದ್ಘಾಟನೆ ಇಂದು

ಕಾಸರಗೋಡು: ಕೇರಳ ರಾಜ್ಯ ಕನ್ನಡ ಚುಟುಕು ಸಾಹಿತ್ಯ ಪರಿಷತ್ ದಕ್ಷಿಣಕನ್ನಡ ಜಿಲ್ಲಾ ಮಟ್ಟದ ಉದ್ಘಾಟನೆ ಇಂದು ಕಿನ್ನಿಗೋಳಿಯ ಯುಗಪುರುಷ ಸಭಾಂಗಣದಲ್ಲಿ ನಡೆಯಲಿದೆ. ಅಪರಾಹ್ನ 2 ಗಂಟೆಗೆ ನಡೆಯುವ ಕಾರ್ಯಕ್ರಮದಲ್ಲಿ ಪದಗ್ರಹಣ, ಪ್ರಶಸ್ತಿಪ್ರದಾನ, ಪುಸ್ತಕ ಬಿಡುಗಡೆ, ಚುಟುಕು ಕವಿಗೋಷ್ಠಿ ನಡೆಯಲಿರುವುದು.

ಚುಟುಕು ಸಾಹಿತ್ಯ ಪರಿಷತ್ತು ಕೇಂದ್ರ ಸಮಿತಿ ಗೌರವಾಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಉದ್ಘಾಟಿಸುವರು. ಕಾಸರಗೋಡು ಕನ್ನಡ ಭವನದ ರೂವಾರಿ, ಕೇಂದ್ರ ಸಮಿತಿಯ ಸ್ಥಾಪಕ ಸಂಚಾಲಕರಾದ ಡಾ. ವಾಮನ್ ರಾವ್ ಬೇಕಲ್-ಸಂಧ್ಯಾರಾಣಿ ಟೀಚರ್ ದೀಪ ಪ್ರಜ್ವಲನೆ ನಡೆಸುವರು. ಕನ್ನಡ ಚು.ಸಾ.ಪ ದ.ಕ. ಜಿಲ್ಲಾ ಘಟಕ ಅಧ್ಯಕ್ಷ ಡಾ. ಕೊಳ್ಚಪ್ಪೆ ಗೋವಿಂದ ಭಟ್ ಅಧ್ಯಕ್ಷತೆ ವಹಿಸುವರು. ಹಲವರು ಗಣ್ಯರು ಉಪಸ್ಥಿತರಿರು ವರು. ಈ ಸಂದರ್ಭದಲ್ಲಿ ಕ.ಸಾ.ಪ ಬೆಂಗಳೂರು ಇದರ ಮಾಜಿ ರಾಜ್ಯಾಧ್ಯಕ್ಷ ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು, ಚುಟುಕು ಸಾಹಿತ್ಯ ಪರಿಷತ್ತು ಕೇಂದ್ರ ಸಮಿತಿ ಗೌರವಾಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ಕರ್ನಾಟಕ ವಿಧಾನ ಪರಿಷತ್ ಮಾಜಿ ಮುಖ್ಯ ಸಚೇತಕ ಕ್ಯಾ. ಗಣೇಶ್ ಕಾರ್ಣಿಕ್, ಸಾಮಾಜಿಕ ಮುಂದಾಳು ಶ್ರೀಪತಿ ಭಟ್  ಮೂಡಬಿದಿರೆ, ಪತ್ರಕರ್ತ ಕೊಡೆತ್ತೂರು ಭುವನಾಭಿರಾಮ ಉಡುಪ ಎಂಬಿವರಿಗೆ  ರಾಷ್ಟ್ರಕವಿ ಗೋವಿಂದ ಪೈ  ರಾಷ್ಟ್ರೀಯ ಪ್ರಶಸ್ತ್ತಿ ಪ್ರದಾನಗೈಯ್ಯಲಾಗುವುದು.

RELATED NEWS

You cannot copy contents of this page