ಕೂಲಿ ಕಾರ್ಮಿಕ ಕುಸಿದುಬಿದ್ದು ಮೃತ್ಯು

ಉಪ್ಪಳ: ಕೂಲಿ ಕಾರ್ಮಿಕ ಕೆಲಸ ವೇಳೆ ಕುಸಿದು ಬಿದ್ದು ಮೃತಪಟ್ಟ ಘಟನೆ ನಡೆದಿದೆ. ಪೈವಳಿಕೆ ಬಳಿಯ ಪೊಲ್ಲರಕೋಡಿ ನಿವಾಸಿ ಮೋಣು ಮೊಗೇರ (62) ಮೃತಪಟ್ಟ ವ್ಯಕ್ತಿ. ನಿನ್ನೆ ಮಧ್ಯಾಹ್ನ ಮನೆ ಸಮೀಪ ಕೆಲಸ ನಿರತರಾಗಿದ್ದ ವೇಳೆ ಇವರು ಕುಸಿದು ಬಿದ್ದಿದ್ದಾರೆ. ಕೂಡಲೇ ಕುಂಬಳೆಯ ಆಸ್ಪತ್ರೆಗೆ ತಲುಪಿಸಿದ್ದು ಅಷ್ಟರೊಳಗೆ  ನಿಧನ ಸಂಭವಿಸಿದೆ. ಕಾಸರಗೋಡು ಜನರಲ್ ಆಸ್ಪತ್ರೆ ಯಲ್ಲಿ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಚೆರುಗೋಳಿ ಹಿಂದೂ  ರುದ್ರಭೂಮಿ ಯಲ್ಲಿ ಅಂತ್ಯಸಂಸ್ಕಾರ ನಡೆಸಲಾಯಿತು.

ಮೃತರು ಪತ್ನಿ ಬೇಬಿ, ಮಕ್ಕಳಾದ ವಿಶ್ವನಾಥ, ಕೇಶವ, ಪ್ರವೀಣ್ ಕುಮಾರ್, ಸೊಸೆಯಂದಿರಾದ ರಾಜೇಶ್ವರಿ, ಗುಲಾಬಿ, ಸಹೋದರಿ ಯರಾದ ಗೀತಾ, ಕಮಲಾಕ್ಷಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

RELATED NEWS

You cannot copy contents of this page