ಮಣಿಯೂರಿನಲ್ಲಿ ಮಕ್ಕಳ ಈಜು ತರಬೇತಿ ಶಿಬಿರ ಸಮಾಪ್ತಿ

ಅಡೂರು: ಅರ್ಪಣಾ ಟ್ರಸ್ಟ್ ಮಣಿಯೂರು ಹಾಗೂ ಶಿಶು ಮೈತ್ರಿ ಪೊಲೀಸ್ ಆದೂರು ಇದರ ಜಂಟಿ ವತಿಯಿಂದ ಮಕ್ಕಳಿಗೆ ಈಜು ತರಬೇತಿ ನೀಡಲಾಯಿತು. ಕಾರ್ಯಕ್ರಮದ ಸಮಾರೋಪ ಸಮಾರಂಭ ಇತ್ತೀಚೆಗೆ ಪಯಸ್ವಿನಿ ನದಿ ತಟದಲ್ಲಿ ಜರಗಿತು. ಆದೂರು ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ತಂಬಾನ್, ಅಗ್ನಿಶಾಮಕ ದಳದ ಅಧಿಕಾರಿಗಳು, ವಾರ್ಡ್ ಪ್ರತಿನಿಧಿ ನಿಶಾ ಸಿ.ಎನ್, ಪ್ರಕಾಶ್ ಮಾಸ್ತರ್, ಪ್ರಮೋದ್ ಬೆಳ್ಳಚ್ಚೇರಿ, ಕೊರಗ ನಾಯ್ಕ್ ಅತಿಥಿಗಳಾಗಿ ಭಾಗವಹಿಸಿದರು.

ಉಡುಪಿಯ ಪೊಲೀಸ್ ಅಧಿಕಾರಿ ಅನಿಲ್ ಕುಮಾರ್, ಕುತ್ತಿಕ್ಕೋಲ್ ಶಶಿಧರನ್ ಹತ್ತು ದಿನಗಳ ಕಾಲ ಮಕ್ಕಳಿಗೆ ಈಜು ತರಬೇತಿ ನೀಡಿದರು. ಸುಮಾರು ೪೦ಕ್ಕೂ ಅಧಿಕ ಮಕ್ಕಳು ಪಾಲ್ಗೊಂಡರು. ಟ್ರಸ್ಟ್‌ನ ಅಧ್ಯಕ್ಷ ವಿವೇಕ್ ಅಡೂರು ಮಾತನಾಡಿ, ಶಾಲೆಗಳಲ್ಲಿ ಪಠ್ಯೇತರ ಚಟುವಟಿಕೆಗಳಾಗಿ ಈಜು ಕೂಡಾ ಒಂದು ವಿಷಯವಾಗಿ ಪರಿಗಣಿಸಬೇಕು, ಪ್ರತೀ ಪಂಚಾಯತ್‌ಗೆ ಒಂದರಂತೆ ಈಜುಕೊಳ ಸ್ಥಾಪಿಸಿ ಮಕ್ಕಳಿಗೆ ಈಜು ಕಲಿಯಲು ಅವಕಾಶ ಕಲ್ಪಿಸಿಕೊಡಬೇಕೆಂದು ಆಗ್ರಹಿಸಿದರು.

You cannot copy contents of this page