ಹಿತ್ತಿಲಲ್ಲಿ ಗಾಂಜಾ ಸಸಿ ಪತ್ತೆ

ಕಾಸರಗೋಡು: ಕ್ವಾರ್ಟರ್ಸ್‌ಗೆ ಸಮೀಪದ ಹಿತ್ತಿಲಲ್ಲಿ ನೆಟ್ಟು ಬೆಳೆಸಲಾಗಿದ್ದ ಗಾಂಜಾ ಸಸಿಯನ್ನು ಅಬಕಾರಿ ತಂಡ ನಡೆಸಿದ ಶೋಧ ಕಾರ್ಯಾಚರಣೆಯಲ್ಲಿ ಪತ್ತೆಹಚ್ಚಲಾಗಿದೆ.

ಚೆರುವತ್ತೂರು ಕೊವ್ವಲ್‌ನ ಐಸ್ ಪ್ಲಾಂಟ್ ಪಕ್ಕದ ಕ್ವಾರ್ಟರ್ಸ್ ಒಂದರ ಸಮೀಪದ ಹಿತ್ತಿಲಲ್ಲಿ ನೀಲೇಶ್ವರ ಅಬಕಾರಿ ರೇಂಜ್‌ನ ಎಕ್ಸೈಸ್ ಇನ್ಸ್ ಪೆಕ್ಟರ್ ಎನ್. ವೈಶಾಖ್‌ರ ನೇತೃತ್ವದ ತಂಡ ನಿನ್ನೆ ನಗರದ ಕಾರ್ಯಾಚರ ಣೆಯಲ್ಲಿ ಈ ಗಾಂಜಾ ಸಸಿಯನ್ನು ಪತ್ತೆಹಚ್ಚಿ ವಶಪಡಿಸಿಕೊಂಡಿದೆ. ಇದು 170 ಸೆಂಟಿ ಮೀಟರ್ ಎತ್ತರದಲ್ಲಿ ಬೆಳೆದ ಸಸಿಯಾಗಿದೆ. ಆದರೆ ಈ ಸಂಬಂಧ ಯಾರನ್ನೂ ಬಂಧಿಸಲಾಗಿರಲ್ಲ. ಇದಕ್ಕೆ ಸಂಬಂಧಿಸಿ ಎನ್‌ಡಿಪಿಎಸ್ ಕಾನೂನು ಪ್ರಕಾರ ಪ್ರಕರಣ ದಾಖಲಿಸಲಾಗಿದೆ. ಅಸಿಸ್ಟೆಂಟ್ ಎಕ್ಸೈಸ್ ಇನ್ಸ್‌ಪೆಕ್ಟರ್ (ಗ್ರೇಡ್) ಅನೀಶ್ ಕುಮಾರ್ ಕೆ. ಪ್ರಿವೆಂಟಿವ್ ಆಫೀಸರ್ ಪ್ರಸಾದ್ ಎಂ.ಎಂ, ಸಿವಿಲ್ ಎಕ್ಸೈಸ್ ಆಫೀಸರ್‌ಗಳಾದ ದಿನೂಪ್ ಕೆ, ಶೈಲೇಶ್ ಕುಮಾರ್ ವಿ. ಮತ್ತು ಚಾಲಕ ರಾಜೀವನ್ ಎಂಬಿವರು ಈ ಕಾರ್ಯಾಚರಣೆ ನಡೆಸಿದ ಅಬಕಾರಿ ತಂಡದಲ್ಲಿ ಒಳಗೊಂಡಿದ್ದರು.

RELATED NEWS

You cannot copy contents of this page