ಕಜೆ ಕ್ಷೇತ್ರ ಮೊಕ್ತೇಸರ ರಮೇಶ್ ಆಳ್ವ ನಿಧನ

ಕಯ್ಯಾರು: ಕಜೆ ಶ್ರೀ ಜನಾರ್ದನ ದೇವಸ್ಥಾನದ ಆಡಳಿತ ಮೊಕ್ತೇಸರ ಪಿಲಿಯಂದೂರು ನಿವಾಸಿ ಪ್ರಸ್ತುತ ಮುಂಬಯಿಯಲ್ಲಿ ವಾಸವಾಗಿರುವ ಉದ್ಯಮಿ ರಮೇಶ ಆಳ್ವ (65) ನಿಧನ ಹೊಂದಿದರು. ಮುಂಬಯಿಯ ಅಂಧೇರಿ ಮರೊಳ್‌ಗಾಂನಲ್ಲಿರುವ ಮನೆಯಲ್ಲಿ ಹೃದಯಾಘಾತ ಉಂಟಾಗಿದ್ದು, ಆಸ್ಪತ್ರೆಗೆ ಕೊಂಡೊಯ್ಯುವ ಮಧ್ಯೆ ನಿಧನ ಸಂಭವಿಸಿದೆ ಎಂದು ಮನೆಯವರು ತಿಳಿಸಿದ್ದಾರೆ. ಮೃತರು ಪತ್ನಿ ಜಗನ್ಮಯಿ ಆಳ್ವ, ಮಕ್ಕಳಾದ  ಸಂಮೃತ್ ಆಳ್ವ, ಪವಿತ್ರ ಆಳ್ವ, ಸೊಸೆ ಸೌಂದರ್ಯ, ಸಹೋದರ ರಾದ ಜಗನ್ನಾಥ ಆಳ್ವ, ಪ್ರಭಾಕರ ಆಳ್ವ, ಸಹೋದರಿಯರಾದ ಗುಲಾಬಿ, ಜಯಂತಿ, ಹಾಗೂ ಬಂಧು ಮಿತ್ರರನ್ನು ಅಗಲಿದ್ದಾರೆ. ಸಹೋದರರಾದ ಕಿಞ್ಞಣ್ಣ ಆಳ್ವ ಈ ಹಿಂದೆ ನಿಧನ ಹೊಂದಿದ್ದಾರೆ.

RELATED NEWS

You cannot copy contents of this page