ಪತ್ತನಂತಿಟ್ಟದಿಂದ ನಾಪತ್ತೆಯಾದ 14ರ ಬಾಲಕಿ ಕಾಸರಗೋಡಿನಲ್ಲಿ ಪತ್ತೆ

ಕಾಸರಗೋಡು: ಪತ್ತನಂತಿಟ್ಟದ ಅಡೂರ್‌ನಿಂದ ನಿನ್ನೆ ನಾಪತ್ತೆಯಾದ ೧೪ರ ಹರೆಯದ ಬಾಲಕಿಯನ್ನು ಕಾಸರಗೋಡಿನಿಂದ ಪತ್ತೆಹಚ್ಚಲಾಗಿದೆ. ಮಲಬಾರ್ ಎಕ್ಸ್‌ಪ್ರೆಸ್‌ನಲ್ಲಿ ಕಾಸರಗೋಡು ರೈಲ್ವೇ ನಿಲ್ದಾಣಕ್ಕೆ ಬಾಲಕಿ ತಲುಪಿದ್ದಳು. ಎಸ್‌ಐ ಎಂ.ವಿ. ಪ್ರಕಾಶ್‌ರ ನೇತೃತ್ವದಲ್ಲಿ ಎಎಸ್‌ಐ ಮಹೇಶ್, ಸಿಪಿಒಗಳಾದ ವಿನೋದ್, ಬಿಜಿತ್, ಸುಶಾಂತ್ ಎಂಬಿವರ ಸಮಯೋಚಿತ ಮಧ್ಯಪ್ರವೇಶದಿಂದ ಬಾಲಕಿಯನ್ನು ಪತ್ತೆಹಚ್ಚಲಾಗಿದೆ. ಪೆರಿಯದ ಓರ್ವ ಗೆಳೆಯನನ್ನು ಕಾಣಲೆಂದು ಈಕೆ ಕಾಸರಗೋಡಿಗೆ ತಲುಪಿರುವುದಾಗಿ ಮಾಹಿತಿ ಲಭಿಸಿದೆ. ಹೇಳಿಕೆ ದಾಖಲಿಸಿದ ಬಳಿಕ ಬಾಲಕಿಯನ್ನು ಶಿಶು ಕ್ಷೇಮ ಸಮಿತಿಗೆ ಹಸ್ತಾಂತರಿಸಲಾಗಿದೆ. ಅಲ್ಲದೆ ಅಡೂರು ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ಪತ್ತನಂತಿಟ್ಟ ಅಡೂರು ಪೊಲೀಸ್ ಠಾಣೆ ವ್ಯಾಪ್ತಿಯ  ಬಾಲಕಿ ನಿನ್ನೆ ತಂದೆಯ ತಾಯಿಯ ಮನೆಗೆ ತೆರಳುವುದಾಗಿ ಹೇಳಿ ಮನೆಯಿಂದ ಹೊರಟಿದ್ದಳು. ನಾಪತ್ತೆಯಾದ ಹಿನ್ನೆಲೆಯಲ್ಲಿ ಮನೆ ಮಂದಿ ಅಡೂರು ಪೊಲೀಸರಿಗೆ ದೂರು ನೀಡಿದ್ದಾರೆ. ಕಾಸರಗೋಡಿಗೆ ಟಿಕೆಟ್ ತೆಗೆದು ರೈಲಿನಲ್ಲಿ ಸಂಚರಿಸಿರುವುದಾಗಿ ಲಭಿಸಿದ ಮಾಹಿತಿ ಹಿನ್ನೆಲೆಯಲ್ಲಿ ರೈಲ್ವೇ ಪೊಲೀಸರು ಹುಡುಕಾಟ ನಡೆಸುತ್ತಿದ್ದ ಮಧ್ಯೆ ಈಕೆಯನ್ನು ಪತ್ತೆಹಚ್ಚಲಾಗಿದೆ.

RELATED NEWS

You cannot copy contents of this page