ಎಕ್ಕಾರು ದೇವಸ್ಯ ಕುಂದರ್ ತರವಾಡು ಮನೆ ಪ್ರತಿಷ್ಠಾ ದಿನಾಚರಣೆ

ಪುತ್ತಿಗೆ: ಬೈರಡ್ಕ ಶ್ರೀ ಎಕ್ಕಾರು ದೇವಸ್ಯ ಕುಂದರ್ ತರವಾಡು ಮನೆ ಪ್ರತಿಷ್ಠಾ ದಿನಾಚರಣೆ ಹಾಗೂ ಶ್ರೀ ಧೂಮಾವತಿ, ಪರಿವಾರ ದೈವಗಳ ನೇಮೋತ್ಸವ ನಾಳೆ, 30ರಂದು ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ. ನಾಳೆ ಬೆಳಿಗ್ಗೆ ತಂತ್ರಿವರ್ಯರ ಆಗಮನ, ಗಣಪತಿ ಹವನ, 9.30ಕ್ಕೆ ಶ್ರೀ ಸತ್ಯನಾರಾಯಣ ಪೂಜೆ, 10 ಗಂಟೆಗೆ ದೈವದ ನೂತನ ಅಲಂಕಾರ ಆಭರಣ ಸಮರ್ಪಣೆ, ತಂಬಿಲ, ಹರಿಸೇವೆ, ಮಧ್ಯಾಹ್ನ ಅನ್ನ ಸಂತರ್ಪಣೆ, 2.30ಕ್ಕೆ ಕುಟುಂಬ ಸಭೆ, ರಾತ್ರಿ ೮ಕ್ಕೆ ಕಲ್ಲಾಲ್ತ ಗುಳಿಗನ ನೇಮ, ಅನ್ನ ಸಂತರ್ಪಣೆ ಬಳಿಕ ಕುಂಟಾಲ್ತಾಯ ದೈವದ ನೇಮ, ಕೊರಗಜ್ಜನ ಜೋಡುಕೋಲ, ಬಳಿಕ ಕೊರತ್ತಿಯಮ್ಮನ ಕೋಲ ನಡೆಯಲಿದೆ.

30ರಂದು ಬೆಳಿಗ್ಗೆ 9ಕ್ಕೆ ಶ್ರೀ ಧೂಮಾವತಿ ದೈವದ ನೇಮ, ಮಧ್ಯಾಹ್ನ ಅನ್ನ ಸಂತರ್ಪಣೆ, ರಾತ್ರಿ 7.30ಕ್ಕೆ ವಿವಿಧ ದೈವಗಳ ಭಂಡಾರ ಇಳಿಯುವುದು, ಅನ್ನ ಸಂತರ್ಪಣೆ ಬಳಿಕ ಕುಪ್ಪೆ ಪಂಜುರ್ಲಿ ಸಹಿತ ವಿವಿಧ ದೈವಗಳ ನೇಮ ನಡೆಯಲಿದೆ.

RELATED NEWS

You cannot copy contents of this page