ಕಾಪಾ ಕಾಯ್ದೆ ಉಲ್ಲಂಘಿಸಿ ಊರಿಗೆ ಬಂದ ಆರೋಪಿ ಬಂಧನ

ಕಾಸರಗೋಡು:  ಕಾಪಾ ಕಾಯ್ದೆ ಹೇರಿ ಗಡೀಪಾರು ಮಾಡಿದ ಆರೋಪಿ ಅನುಮತಿಯಿಲ್ಲದೆ ಜಿಲ್ಲೆಗೆ ಪ್ರವೇಶಿಸಿದ್ದು, ಈ ವೇಳೆ ಆತನನ್ನು ಪೊಲೀಸರು ಬಂಧಿಸಿದ್ದಾರೆ. ಕಾಞಂಗಾಡ್ ಕಲ್ಯಾಣ್ ರೋಡ್ ನಿವಾಸಿ ಸುಧೀಶ್ ಕೆ (25) ಎಂಬಾತನನ್ನು ಹೊಸದುರ್ಗ ಪೊಲೀಸರು ಬಂಧಿಸಿದ್ದಾರೆ. ಕಾಸರಗೋಡು ಜಿಲ್ಲೆಗೆ ಪ್ರವೇಶಿಸದಂತೆ ಈತನಿಗೆ ನಿಯಂತ್ರಣ ಹೇರಲಾಗಿತ್ತು.  ಈ ನಿಯಂತ್ರಣವನ್ನು ಉಲ್ಲಂಘಿಸಿ  ಈತ ಕಾಞಂಗಾಡ್ ಹೊಸ ಬಸ್ ನಿಲ್ದಾಣ ಪರಿಸರ ಸಹಿತ ವಿವಿಧೆಡೆ ತಿರುಗಾಡುತ್ತಿರುವ ಬಗ್ಗೆ ತಿಳಿದು  ಪೊಲೀಸರು  ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.

ಹೊಸದುರ್ಗ, ನೀಲೇಶ್ವರ ಪೊಲೀಸ್ ಠಾಣೆಗಳಲ್ಲಾಗಿ ಐದರಷ್ಟು  ಕ್ರಿಮಿನಲ್  ಪ್ರಕರಣಗಳಲ್ಲಿ ಆರೋಪಿಯಾದ ಸುಧೀಶ್‌ನನ್ನು ಕಳೆದ ಫೆಬ್ರವರಿ ತಿಂಗಳಲ್ಲಿ ಕಣ್ಣೂರು ರೇಂಜ್ ಡಿಐಜಿ  ಆರು  ತಿಂಗಳಿಗೆ ಕಾಪಾ ಹೇರಿ ಗಡೀಪಾರು ಮಾಡಿದ್ದರು.  ಹೊಸದುರ್ಗ ಪೊಲೀಸ್ ಇನ್‌ಸ್ಪೆಕ್ಟರ್ ಪಿ. ಅಜಿತ್ ಕುಮಾರ್ ರ ನೇತೃತ್ವದಲ್ಲಿ ಸಬ್ ಇನ್‌ಸ್ಪೆಕ್ಟರ್  ವರುಣ್ ಪಿ.ವಿ, ಸೀನಿಯರ್ ಸಿವಿಲ್ ಪೊಲೀಸ್ ಆಫೀಸರ್ ಸುನೀಶ್ ಕುಮಾರ್, ಸಿವಿಲ್ ಪೊಲೀಸ್ ಆಫೀಸರ್ ಅನೂಪ್ ಮಾಣಿ ಯಾಟ್, ಪಿ.ವಿ. ರಮಿತ್ ಎಂಬಿವರು ಒಳ ಗೊಂಡ ತಂಡ ಆರೋಪಿಯನ್ನು ಬಂಧಿಸಿದೆ.

RELATED NEWS

You cannot copy contents of this page