ಅರ್ಧ ಬೆಲೆಗೆ ಸ್ಕೂಟರ್ ತನಿಖೆ ಕ್ರೈಂಬ್ರಾಂಚ್‌ಗೆ

ಕಾಸರಗೋಡು: ಅರ್ಧ ಬೆಲೆಗೆ ಸ್ಕೂಟರ್ ಸಹಿತ ವಿವಿಧ ಉಪಕರಣಗಳನ್ನು ನೀಡಲಾಗುವುದೆಂಬ ಭರವಸೆಯೊಡ್ಡಿ ಹಲವರಿಂದ ಹಣ ಸಂಗ್ರಹ ನಡೆಸಿ ವಂಚಿಸಲಾಯಿತೆಂಬ ಪ್ರಕರಣದ ತನಿಖೆಯನ್ನು ಕ್ರೈಂಬ್ರಾಂಚ್‌ಗೆ ಹಸ್ತಾಂತರಿಸಲಾಗಿದೆ. ಬದಿಯಡ್ಕ  ಹಾಗೂ ಹೊಸದುರ್ಗ ಪೊಲೀಸರು ದಾಖಲಿಸಿಕೊಂಡ ಪ್ರಕರಣವನ್ನು ಕ್ರೈಂಬ್ರಾಂಚ್‌ಗೆ  ಹಸ್ತಾಂತರಿಸಿರುವುದಾಗಿ ತಿಳಿದುಬಂದಿದೆ. ಅರ್ಧ ಬೆಲೆಗೆ ಸ್ಕೂಟರ್ ಹಾಗೂ ಇತರ ಉಪ ಕರಣಗಳನ್ನು ನೀಡಲಾಗುವುದೆಂದು  ನಂಬಿಸಿ ಹಣ ಸಂಗ್ರಹ ನಡೆಸಲಾ ಯಿತೆಂಬ ಆರೋಪ ರಾಜ್ಯದ ವಿವಿಧೆಡೆಗಳಲ್ಲಿ ಕೇಳಿಬಂದಿತ್ತು.

RELATED NEWS

You cannot copy contents of this page