ಅಸೌಖ್ಯ ಬಾಧಿಸಿ ಚಿಕಿತ್ಸೆಯಲ್ಲಿದ್ದ ಬಾಲಕ ಮೃತ್ಯು

ಬದಿಯಡ್ಕ: ತೀವ್ರ ಅಸೌಖ್ಯ ಬಾಧಿಸಿ ಚಿಕಿತ್ಸೆಯಲ್ಲಿದ್ದ ಬಾಲಕನ ಜೀವ ರಕ್ಷಿಸಲು ನಡೆಸಿದ ಪ್ರಯತ್ನಗಳೆಲ್ಲಾ ವಿಫಲಗೊಂಡಿತು. ಪೈಕ ಚೆಂಬಡವಳಪ್ಪ್ ನಿವಾಸಿ ಗಣೇಶನ್- ಪ್ರಿಯಾ ದಂಪತಿಯ ಪುತ್ರ ಅಭಿನವ್ (9) ಕಾಸರಗೋಡಿನ ಖಾಸಗಿ ಆಸ್ಪತ್ರೆಯಲ್ಲಿ ನಿನ್ನೆ ಮೃತಪಟ್ಟನು. ತೀವ್ರ ಅಸೌಖ್ಯ ಬಾಧಿಸಿದ್ದ ಈತನಿಗೆ ಮಂಗಳೂರು, ತಲಶ್ಶೇರಿ ಎಂಬೆಡೆಗಳ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗಿತ್ತು. ಅಭಿನವ್‌ಗೆ ಅಗತ್ಯದ ಚಿಕಿತ್ಸೆ ನೀಡಿ ರೋಗ ಗುಣಪಡಿಸಲು ಹಲವರು ಸಹಾಯವೊದಗಿಸಿದ್ದಾರೆ. ಆದರೆ ಚಿಕಿತ್ಸೆಗಳೆಲ್ಲಾ ಫಲಕಾರಿಯಾಗದೆ ಬಾಲಕ ಮೃತಪಟ್ಟ ದಾರುಣ ಘಟನೆಯಿಂದ ಕುಟುಂಬ ಹಾಗೂ ನಾಡಿನಲ್ಲಿ ಶೋಕಸಾಗರ ಸೃಷ್ಟಿಸಿದೆ. ಮೃತನು ತಂದೆ, ತಾಯಿ, ಸಹೋದರಿ ಅನು ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾನೆ.

RELATED NEWS

You cannot copy contents of this page