95.4 ಲೀಟರ್ ಕರ್ನಾಟಕ  ಮದ್ಯ ವಶ: ಆರೋಪಿ ಪರಾರಿ

ಬದಿಯಡ್ಕ: ಬೇಳ ಗ್ರಾಮದ ಮಾನ್ಯ- ಆಲಂಪಾಡಿ ರಸ್ತೆ ಬಳಿಯ ಮುಂಡೋಡುನಲ್ಲಿ ಅಬಕಾರಿ ತಂಡ ನಿನ್ನೆ ನಡೆಸಿದ ಕಾರ್ಯಾಚರಣೆಯಲ್ಲಿ 95.04 ಲೀಟರ್ ಕರ್ನಾಟಕ ನಿರ್ಮಿತ ಮದ್ಯ (528 ಪ್ಯಾಕೆಟ್) ಪತ್ತೆಹಚ್ಚಿ ವಶಪಡಿಸಿಕೊಂಡಿದೆ. ಕಾರೊಂದರಲ್ಲಿ ಈ ಮಾಲು ಸಾಗಿಸಲಾಗುತ್ತಿತ್ತೆಂದೂ, ಇದಕ್ಕೆ ಸಂಬಂಧಿಸಿ ಕುಂಜತ್ತೂರು ಶಾರದಾ ನಿವಾಸದ ಅಣ್ಣು ಅಲಿಯಾಸ್ ಅರವಿಂದಾಕ್ಷ ಕೆ. (44) ಎಂಬಾತನ ವಿರುದ್ಧ ಕೇಸು ದಾಖಲಿಸಲಾಗಿದೆ. ಆದರೆ ಈ ವೇಳೆ ಆತ ಕಾರು ಮತ್ತು ಮಾಲನ್ನು ಅಲ್ಲೇ ಉಪೇಕ್ಷಿಸಿ ಪರಾರಿಯಾದನೆಂದೂ ಅದರಿಂದಾಗಿ ಆತನನ್ನು ಬಂಧಿಸಲು ಸಾಧ್ಯವಾಗಿಲ್ಲವೆಂದು ಅಬಕಾರಿ ಅಧಿಕಾರಿಗಳು ತಿಳಿಸಿದ್ದಾರೆ.

ಕಾಸರಗೋಡು ಎಕ್ಸೈಸ್ ರೇಂಜ್ ಆಫೀಸರ್ ಸುರೇಶ್ ಎನ್.ರ ನೇತೃತ್ವದಲ್ಲಿ ಪ್ರಿವೆಂಟೀವ್ ಆಫೀಸರ್‌ಗಳಾದ ಉಣ್ಣಿಕೃಷ್ಣನ್ ಕೆ, ಸಾಜನ್ ಅಪ್ಯಾಲ್, ರಂಜಿತ್ ಕೆ.ವಿ, ಸಿವಿಲ್ ಎಕ್ಸೈಸ್ ಆಫೀಸರ್‌ಗಳಾದ ಶ್ಯಾಮ್‌ಜಿತ್ ಎಂ, ಕಣ್ಣನ್ ಕುಂಞಿ ಟಿ. ಮತ್ತು ಅಮಲ್‌ಜಿತ್ ಸಿ.ಎಂ. ಎಂಬವರನ್ನೊಳಗೊಂಡ ಅಬಕಾರಿ ತಂಡ ಈ ಕಾರ್ಯಾಚರಣೆ ನಡೆಸಿದೆ.

RELATED NEWS

You cannot copy contents of this page