ರಾಷ್ಟ್ರೀಯ ಹೆದ್ದಾರಿ ಷಟ್ಪಥ ಯೋಜನೆ ಡಿಸೆಂಬರ್‌ನಲ್ಲಿ ಪೂರ್ತೀಕರಿಸಲಾಗುವುದು-ಕೇಂದ್ರ ಸಚಿವ ಗಡ್ಕರಿ

ತಿರುವನಂತಪುರ: ಕೇರಳದ ರಾಷ್ಟ್ರೀಯ ಹೆದ್ದಾರಿಯನ್ನು ಷಟ್ಪಥವಾಗಿ ಅಭಿವೃದ್ಧಿಗೊಳಿಸುವ ಯೋಜನೆಯನ್ನು ಈವರ್ಷ ಡಿಸೆಂಬ ರ್‌ನೊಳಗಾಗಿ ಪೂರ್ತೀಕರಿಸಲಾಗು ವುದೆಂದು ಕೇಂದ್ರ ಭೂಸಾರಿಗೆ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ. ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನೇತೃತ್ವದಲ್ಲಿ ರಾಜ್ಯ ಲೋಕೋಪಯೋಗಿ ಖಾತೆ ಸಚಿವರನ್ನೊಳಗೊಂಡ ನಿಯೋಗ ದಿಲ್ಲಿಯಲ್ಲಿ ನಿನ್ನೆ ಕೇಂದ್ರ ಭೂಸಾರಿಗೆ ಸಚಿವರನ್ನು ಭೇಟಿಯಾಗಿ ಕೇರಳದ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಯೋಜನೆ ಬಗ್ಗೆ ನಡೆಸಿದ ಚರ್ಚೆಯ ವೇಳೆ ಕೇಂದ್ರ ಸಚಿವರು ಈ ಭರವಸ ನೀಡಿದ್ದಾರೆ. ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಯೋಜನೆ ನಡೆಸುತ್ತಿರುವ ಕೆಲವು ರೀಚ್‌ಗಳಲ್ಲಿ ಸಮಸ್ಯೆಗಳು ಸೃಷ್ಟಿಯಾಗಿದ್ದರೂ ಅದಕ್ಕೆ ಪರಿಹಾರ ಕಂಡುಕೊಂಡು ನಿರ್ಮಾಣ ಕೆಲಸಗಳನ್ನೆಲ್ಲಾ ಸಮಯೋಚಿತವಾಗಿ  ಪೂರ್ತೀಕರಿಸಲಾಗುವುದು. ಮಾತ್ರವಲ್ಲ ನಿರ್ಮಾಣ ಕೆಲಸಗಳು ಗುಣಮಟ್ಟವನ್ನು ಖಾತರಿಪಡಿಸಲಾ ಗುವುದು. ಈ ಕುರಿತಾದ ನಿರ್ದೇಶ ವನ್ನು ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರಕ್ಕೆ ಈಗಾಗಲೇ ನೀಡಲಾ ಗಿದೆ.  ನಿರ್ಮಾಣ ಕೆಲಸದಲ್ಲಿ ಯಾವುದೇ ರೀತಿಯ ಲೋಪದೋ ಷಗಳು ಉಂಟಾಗಬಾರದು. ಆ ಬಗ್ಗೆ ಹೆಚ್ಚಿನ ಗಮನಹರಿಸಬೇಕೆಂಬ ನಿರ್ದೇಶವನ್ನೂ ಸಚಿವರು ಪ್ರಾಧಿಕಾರಕ್ಕೆ ನೀಡಿದ್ದಾರೆ.

RELATED NEWS

You cannot copy contents of this page