ಕಿಡ್ನಿ ರೋಗಿಗಳಿಗೆ ನೆರವಾಗುತ್ತಿರುವ ಕಾರಡ್ಕ ಬ್ಲೋಕ್ ಪಂ. ಡಯಾಲಿಸಿಸ್ ಘಟಕ

ಮುಳ್ಳೇರಿಯ: ಕಾರಡ್ಕ ಬ್ಲೋಕ್ ಪಂಚಾಯತ್ನ ‘ಕರುದಲ್’ ಡಯಾಲಿಸಿಸ್ ಘಟಕ ಆರಂಭಗೊAಡು ಐದು ವರ್ಷ ಗಳಾಗಿದ್ದು, ಇದು ಹಲವಾರು ರೋಗಿಗಳಿಗೆ ಪ್ರಯೋಜ ಕಾರಿ ಯಾಗಿದೆ. ಇದುವರೆಗೆ 76 ಮಂದಿ ಕಿಡ್ನಿ ರೋಗಿಗಳಿಗೆ ಒಟ್ಟು 12785 ಡಯಾಲಿಸಿಸ್ ನಡೆಸಲಾಗಿದೆ ಎಂದು ಸಂಬAಧಪಟ್ಟವರು ತಿಳಿಸಿದ್ದಾರೆ. ಕಳೆದ ಮೇ ತಿಂಗಳಲ್ಲಿ ಮಾತ್ರ 331 ಡಯಾಲಿಸಿಸ್ ನಡೆಸಲಾಗಿದೆ.
ಕಾರಡ್ಕ ಬ್ಲೋಕ್ ವ್ಯಾಪ್ತಿಯ ವಿವಿಧ ಪಂಚಾಯತ್ಗಳಲ್ಲಿರುವ ಕಿಡ್ನಿ ರೋಗಿಗಳಿಗೆ ಡಯಾಲಿಸಿಸ್ಗಾಗಿ ಹಲವು ಗಂಟೆಗಳ ಕಾಲ ದೂರದ ಆಸ್ಪತ್ರೆಗಳಿಗೆ ಪ್ರಯಾಣಿಸಬೇಕಾಗಿ ಬರುತ್ತಿದ್ದ ಹಿನ್ನೆಲೆಯಲ್ಲಿ ಕೋವಿಡ್ ಮಹಾಮಾರಿ ತೀವ್ರಗೊಂಡ ಸಂದರ್ಭದಲ್ಲಿ ಬ್ಲೋಕ್ ಪಂಚಾಯತ್ ವ್ಯಾಪ್ತಿಯಲ್ಲಿ ಡಯಾಲಿಸಿಸ್ ಯೂನಿಟ್ ಆರಂಭಿಸಲು ಬ್ಲೋಕ್ ಪಂ. ಆಡಳಿತ ಸಮಿತಿ ನಿರ್ಧರಿಸಿದೆ.
ಆರಂಭ ಹಂತದಲ್ಲಿ ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್, ಶಾಸಕರ ಫಂಡ್, ಬ್ಲೋಕ್ ಪಂಚಾಯತ್ನ ಮೊತ್ತ ಬಳಸಿ ಮುಳಿಯಾರು ಸಾಮೂಹಿಕ ಆರೋಗ್ಯ ಕೇಂದ್ರದ ಕಟ್ಟಡದಲ್ಲಿ ಮೂಲಭೂತ ಸೌಕರ್ಯ ಸಿದ್ಧಪಡಿಸಿ 2021 ಡಿಸೆಂಬರ್ನಲ್ಲಿ ಡಯಾಲಿಸಿಸ್ ಘಟಕ ಆರಂಭಿಸಲಾಗಿತ್ತು. ಅನಂತರ ತ್ರಿಸ್ತರ ಪಂಚಾಯತ್ಗಳಿAದ ಮೊತ್ತ ಲಭಿಸತೊಡಗಿರುವುದು ಈ ಘಟಕದ ಚಟುವಟಿಕೆಗೆ ಸಹಾಯವಾಯಿತು. ಆರಂಭದಲ್ಲಿ ಎಂಟು ಯಂತ್ರಗಳು ಹಾಗೂ ಬೆಡ್ಗಳೊಂದಿಗೆ ಆರಂಭಗೊAಡ ಚಟುವಟಿಕೆ 2022 ಪೂರ್ತಿಯಾಗುವುದರೊಂದಿಗೆ ಎರಡು ಶಿಫ್ಟ್ಗಳಲ್ಲಾಗಿ ಒಂದು ದಿನ 16 ರೋಗಿಗಳಿಗೆ ಡಯಾಲಿಸಿಸ್ ನಡೆಸಲಾ ಗುವ ರೀತಿಯಲ್ಲಿ ವ್ಯವಸ್ಥೆ ಏರ್ಪಡಿಸಲಾ ಯಿತು. ಬೆಳಿಗ್ಗೆ 7 ಗಂಟೆಗೆ ಆರಂಭ ಗೊಳ್ಳುವ ಡಯಾಲಿಸಿಸ್ ಘಟಕದ ಚಟುವಟಿಕೆ ಸಂಜೆ 5.30ರವರೆಗೆ ಮುಂದುವರಿಯುತ್ತಿದೆ. ಆದಿತ್ಯವಾರ ರಜಾದಿನವಾಗಿದೆ. ಶುಚೀಕರಣ ಸಿಬ್ಬಂದಿ ಸಹಿತ 10 ಮಂದಿ ನೌಕರರು ಇಲ್ಲಿದ್ದಾರೆ. ಬ್ಲೋಕ್ ಪಂಚಾಯತ್ ವ್ಯಾಪ್ತಿಯಲ್ಲಿರುವ ಕಾರಡ್ಕ, ಕುಂಬ್ಡಾಜೆ, ಬೆಳ್ಳೂರು, ದೇಲಂಪಾಡಿ, ಮುಳಿಯಾರು, ಕುತ್ತಿಕ್ಕೋಲ್, ಬೇಡಡ್ಕ ಎಂಬೀ ಪಂಚಾಯತ್ಗಳಲ್ಲಿ ಡಯಾಲಿಸಿಸ್ ನಡೆಸಬೇಕಾದ ರೋಗಿಗಳಿಂದ ಲಭಿಸಿದ ಅರ್ಜಿಯ ಆಧಾರದಲ್ಲಿ ರೋಗದ ತೀವ್ರತೆ ಕಡಿಮೆಯಿರುವ ರೋಗಿಗಳನ್ನು ಆಯ್ದು ಡಯಾಲಿಸಿಸ್ ನಡೆಸಲಾಗುತ್ತಿದೆ. ಎಪಿಎಲ್ ವಿಭಾಗದಲ್ಲಿರುವವರಿಂದ 500 ರೂ. ನೋಂದಣಿ ಶುಲ್ಕವಾಗಿಯೂ ಅನಂತರದ ಪ್ರತೀ ಡಯಾಲಿಸಿಸ್ಗೆ 300 ರೂ.ನಂತೆ ಪಡೆಯಲಾಗುತ್ತಿದೆ. ಬಿಪಿಎಲ್ ವಿಭಾಗದವರಿಗೆ ಡಯಾಲಿಸಿಸ್ ಉಚಿತವಾಗಿರುವುದು. ಡಯಾಲಿಸಿಸ್ ಘಟಕದ ನಿರ್ವಹಣೆಗೆ, ದುರಸ್ತಿ ಕಾರ್ಯಗಳಿಗೆ, ನೌಕರರ ವೇತನ, ಔಷಧಿ ಹಾಗೂ ಇತರ ಸಾಮಗ್ರಿಗಳಿಗಾಗಿ ಪ್ರತಿ ತಿಂಗಳು 7 ಲಕ್ಷ ರೂಪಾಯಿ ಖರ್ಚು ತಗಲುತ್ತದೆಯೆಂದು ಮೆಡಿಕಲ್ ಆಫೀಸರ್ ಶಮೀಮ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

You cannot copy content of this page