ಆರು ಲೀಟರ್ ಮದ್ಯ ವಶ: ಓರ್ವ ಸೆರೆ

ಕಾಸರಗೋಡು: ನೀಲೇಶ್ವರಕ್ಕೆ ಸಮೀಪದ ಕಾಟುಂಕವಲದ ಕುಳಮಲದಲ್ಲಿ ನೀಲೇಶ್ವರ ಅಬಕಾರಿ ರೇಂಜ್‌ನ ಪ್ರಿವೆಂಟಿವ್ ಆಫೀಸರ್ ಸಿ.ಕೆ.ವಿ. ಸುರೇಶ್‌ರ ನೇತೃತ್ವದ ತಂಡ ನಿನ್ನೆ ನಡೆಸಿದ ಕಾರ್ಯಾಚರಣೆಯಲ್ಲಿ ಆರು ಲೀಟರ್ ಕೇರಳ ನಿರ್ಮಿತ ಮದ್ಯ ಪತ್ತೆಹಚ್ಚಿ ವಶಪಡಿಸಲಾಗಿದೆ.

ಇದಕ್ಕೆ ಸಂಬಂಧಿಸಿ ಕುಳಮಲದ ಅನೀಶ್ (೩೯) ಎಂಬಾತನನ್ನು ಬಂಧಿಸಿ ಪ್ರಕರಣ ದಾಖಲಿಸಲಾಗಿದೆ. ಮಾತ್ರವಲ್ಲ ಈತ ಈ ಪ್ರದೇಶದಲ್ಲಿ ಮದ್ಯ ಮಾರಾಟ ನಡೆಸುತ್ತಿರುವ ವ್ಯಕ್ತಿಯಾರುವುದಾಗಿ ಅಬಕಾರಿ ಅಧಿಕಾರಿಗಳು ಹೇಳಿದ್ದಾರೆ. ಸಿಇಒಗಳಾದ ಪ್ರಜ್ವಲ್ ಕುಮಾರ್, ಸುನಿಲ್ ಕುಮಾರ್, ಮಹಿಳಾ ಸಿಇಒ ತಜ್ಞ ಮತ್ತು ಚಾಲಕ ರಾಜೀವನ್ ಎಂಬವರು ಈ ಕಾರ್ಯಾಚರಣೆ ನಡೆಸಿದ ಅಬಕಾರಿ ತಂಡದಲ್ಲಿ ಒಳಗೊಂಡಿದ್ದಾರೆ.

RELATED NEWS

You cannot copy contents of this page