ಚಾಲಕ ಮದ್ಯದಮಲಿನಲ್ಲಿ ಚಲಾಯಿಸಿದ ಲಾರಿ ಆಟೋಗೆ ಢಿಕ್ಕಿ

ಕಾಸರಗೋಡು:  ಮದ್ಯದ ಅಮಲಿನಲ್ಲಿ ಚಾಲಕ ಓಡಿಸಿದ ಲಾರಿ ಪಿಕ್‌ಅಪ್ ಆಟೋಗೆ ಢಿಕ್ಕಿ ಹೊಡೆದ ಘಟನೆ ನಡೆದಿದೆ.  ಹೆಚ್ಚಿನ ವಾಹನಗಳಿಗೆ ಢಿಕ್ಕಿ ಹೊಡೆಯುವ ಮೊದಲು ಲಾರಿಯನ್ನು ಸ್ಥಳದಲ್ಲಿದ್ದವರು ಹಾಗೂ ಪೊಲೀಸರು ತಡೆದು ನಿಲ್ಲಿಸಿದುದರಿಂದ ಹೆಚ್ಚಿನ ದುರಂತ ಸಂಭವಿಸಲಿಲ್ಲ.

ಇಂದು ಬೆಳಿಗ್ಗೆ  ೧೦ ಗಂಟೆ ವೇಳೆ ಕಾಸರಗೋಡು ಹೊಸ ಬಸ್ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ.  ಆಂಧ್ರ ಪ್ರದೇಶದ ನೋಂದಾವಣೆ ಹೊಂದಿರುವ  ಕಂಟೈನರ್ ಲಾರಿ  ಅಪಘಾತಕ್ಕೀಡಾಗಿದೆ. ಚಾಲಕ ಮದ್ಯದಮಲಿನಲ್ಲಿದ್ದುದೇ ಅಪಘಾತಕ್ಕೆ ಕಾರಣವಾಗಿದೆಯೆಂದು ಪೊಲೀಸರು ತಿಳಿಸಿದ್ದಾರೆ. ಲಾರಿಯನ್ನು ಪೊಲೀಸರು ಕಸ್ಟಡಿಗೆ ತೆಗೆದುಕೊಂಡಿದ್ದು ಚಾಲಕನನ್ನು ವೈದ್ಯಕೀಯ ತಪಾಸಣೆಗೊಳಪಡಿ ಸುವುದಾಗಿ ತಿಳಿಸಲಾಗಿದೆ.

You cannot copy contents of this page