೩೫ ಲಕ್ಷ ರೂ.ಗಳ ಚಿನ್ನ ಗುದದ್ವಾರದಲ್ಲಿ ಬಚ್ಚಿಟ್ಟು ಸಾಗಾಟ: ದುಬಾಯಿಯಿಂದ ಬಂದಾತ ಸೆರೆ

ಮಂಗಳೂರು: ವ್ಯಕ್ತಿಯೋರ್ವ ಗುದದ್ವಾರದಲ್ಲಿ ಬಚ್ಚಿಟ್ಟು ಸಾಗಿಸುತ್ತಿದ್ದ ೩೫ ಲಕ್ಷ ರೂಪಾಯಿಗಳ ಚಿನ್ನವನ್ನು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಂಸ್ ಅಧಿಕಾರಿಗಳು ವಶಪಡಿಸಿ ಕೊಂಡಿ ದ್ದಾರೆ. ನ. ೨೯ರಂದು ದುಬಾಯಿ ಯಿಂದ ಏರ್ ಇಂಡಿಯ ಎಕ್ಸ್ ಪ್ರೆಸ್ ವಿಮಾನದಲ್ಲಿ ಬಂದಿಳಿದ ಪ್ರಯಾಣಿಕನನ್ನು ಕಸ್ಟಂಸ್ ಅಧಿಕಾರಿಗಳು ತಪಾಸಣೆ ನಡೆಸಿದಾಗ ಆತ ಗುದದ್ವಾರದಲ್ಲಿ  ಚಿನ್ನ ಬಚ್ಚಿಟ್ಟಿರುವುದು ತಿಳಿದು ಬಂದಿದೆ. ೫೭೧ ಗ್ರಾಂ ಚಿನ್ನವನ್ನು ಈತ ಮಾತ್ರೆಗಳ ರೂಪದಲ್ಲಾಗಿಸಿ ಗುದ ದ್ವಾರದಲ್ಲಿ ಬಚ್ಚಿಟ್ಟಿದ್ದನು. ವಶಪಡಿ ಸಿದ ಚಿನ್ನಕ್ಕೆ ೩೫,೧೧,೬೫೦ ರೂಪಾ ಯಿ ಮೌಲ್ಯ ಅಂದಾಜಿಸಲಾಗಿದೆ.

RELATED NEWS

You cannot copy contents of this page