ಡಾ| ಅಖಿಲ ಯಾನೆ ಹಾದಿಯ ನಾಪತ್ತೆಯಾಗಿರುವುದಾಗಿ ತಿಳಿಸಿ ತಂದೆಯಿಂದ ನ್ಯಾಯಾಲಯಕ್ಕೆ ಅರ್ಜಿ

ಕೊಚ್ಚಿ: ಡಾ| ಅಖಿಲ ಯಾನೆ ಹಾದಿಯ ಎಂಬಾಕೆ ನಾಪತ್ತೆಯಾಗಿದ್ದಾಳೆಂದು ತಿಳಿಸಿ ತಂದೆ ಅಶೋಕನ್ ಸಲ್ಲಿಸಿದ ಹೇಬಿಯಸ್ ಕಾರ್ಪಸ್ ಅರ್ಜಿಯನ್ನು ಹೈಕೋರ್ಟ್ ಸ್ವೀಕರಿಸಿದೆ. ಅಲ್ಲದೆ ಪ್ರತಿವಾದಿಗಳಾದ ರಾಜ್ಯ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಮಲಪ್ಪುರಂ ಎಸ್ಪಿಗೆ ನೋಟೀಸ್ ಜ್ಯಾರಿಗೊಳಿಸಿದೆ. ಈ ತಿಂಗಳ ೧೬ರಂದು ಮತ್ತೆ ನ್ಯಾಯಾಲಯ ಅರ್ಜಿಯನ್ನು ಪರಿಗಣಿಸಲಿದೆ. ಪುತ್ರಿಯನ್ನು ಮಲಪ್ಪುರಂ ನಿವಾಸಿಯಾದ ಸೈನಬ ಎಂಬಾಕೆ ಸಹಿತ ಕೆಲವರು ದಿಗ್ಬಂಧನದಲ್ಲಿರಿಸಿ ದ್ದಾರೆಂದು ತಿಳಿಸಿ ಅಶೋಕನ್ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದಾರೆ. ಕಳೆದ ಕೆಲವು ದಿನಗಳಿಂದ ಮಗಳ ಫೋನ್ ಸ್ವಿಚ್ ಆಫ್ ಆಗಿದೆಯೆಂದೂ ಮಲಪ್ಪುರಂನಲ್ಲಿರುವ ಕ್ಲಿನಿಕ್ ಮುಚ್ಚುಗಡೆಗೊಳಿಸಿದ ಸ್ಥಿತಿಯಲ್ಲಿದೆಯೆಂದೂ ಅಶೋಕನ್ ಸಲ್ಲಿಸಿದ ಅರ್ಜಿಯಲ್ಲಿ ತಿಳಿಸಲಾಗಿದೆ. ತಮಿಳುನಾಡಿನಲ್ಲಿ ಮೆಡಿಕಲ್ ವಿದ್ಯಾರ್ಥಿನಿಯಾಗಿದ್ದಾಗ ಅಖಿಲಾ ಮತಾಂತರಗೊಂಡು ಮಲಪ್ಪುರಂ ನಿವಾಸಿ ಶೆಫಿನ್ ಜಹಾನ್ ಎಂಬಾತನನ್ನು ವಿವಾಹವಾಗಿದ್ದಳು.

RELATED NEWS

You cannot copy contents of this page