ಮಂಜೇಶ್ವರ ಸೇವಾ ಸಹಕಾರಿ ಬ್ಯಾಂಕ್ ಆಡಳಿತ ಮಂಡಳಿ
ಮಂಜೇಶ್ವರ: ಮಂಜೇಶ್ವರ ಸೇವಾ ಸಹಕಾರಿ ಬ್ಯಾಂಕ್ನ ಮುಂದಿನ 5 ವರ್ಷದ ಅವಧಿಗೆ ನೂತನ ಆಡಳಿತ ಮಂಡಳಿಯನ್ನು ಬ್ಯಾಂಕ್ನ ಮಹಾಸಭೆ ಅವಿರೋಧವಾಗಿ ಆಯ್ಕೆ ಮಾಡಿತು. ಬ್ಯಾಂಕ್ನ ಅಧ್ಯಕ್ಷರಾಗಿ ಎಸ್. ರಾಮಚಂದ್ರ ಬಡಾಜೆ ಹಾಗೂ ಉಪಾಧ್ಯಕ್ಷರಾಗಿ ವಿಜಯ ಕನಿಲ ಮತ್ತು ನಿರ್ದೇಶಕರಾಗಿ ಗಣೇಶ್ ಸಿ.ಎಚ್, ಯತೀಶ್ ಕಾಜೂರ್, ಡಾ| ಕೆ.ಎ ಖಾದರ್, ಗಂಗಾಧರ. ಕೆ, ಎಚ್. ಗಂಗಾಧರ, ಕೆ.ಕೆ ರಾಮಚಂದ್ರ ಕಣ್ವತೀರ್ಥ, ಸೇಸಮ್ಮ ಉದ್ಯಾವರ, ನಾರಾಯಣಿ ರಾಜನ್, ರೇಖಾ ಕೀರ್ತೇಶ್ವರ ಆಯ್ಕೆಯಾದರು. ನೂತನ ಆಡಳಿತ ಮಂಡಳಿಗೆ ಬ್ಯಾಂಕ್ ಸದಸ್ಯರು ಮತ್ತು ಸಿಬ್ಬಂದಿವರ್ಗ ಅಭಿನಂದನೆ ಸಲ್ಲಿಸಿದೆ.