ನಿರ್ಮಾಣ ಹಂತದಲ್ಲಿರುವ ಮನೆ ಮೇಲಿನಿಂದ ಬಿದ್ದು ಗಾಯಗೊಂಡ ವ್ಯಕ್ತಿ ಮೃತ್ಯು

ಕಾಸರಗೋಡು: ನಿರ್ಮಾಣ ಹಂತದಲ್ಲಿರುವ ಮನೆ ಮೇಲಿನಿಂದ ನಿಯಂತ್ರಣ ತಪ್ಪಿ ಕೆಳಕ್ಕೆ ಬಿದ್ದು ಗಂಭೀರ ಗಾಯಗೊಂಡು ಮಂಗಳೂ ರಿನ ಆಸ್ಪತ್ರೆಯಲ್ಲಿ ದಾಖಲಾಗಿದ್ದ ವ್ಯಕ್ತಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ ಘಟನೆ ನಡೆದಿದೆ. ಮೊಗ್ರಾಲ್ ಪುತ್ತೂರು ಕಂಬಾರು ಬಳ್ಳಿಗೆಯ ಮೊಹಮ್ಮದ್ (೬೦) ಎಂಬವರು ಸಾವನ್ನಪ್ಪಿದ ವ್ಯಕ್ತಿ. ಇವರು ಡಿಸೆಂಬರ್ ೧೯ರಂದು ಮನೆ ಮೇಲಿನಿಂದ ಕೆಳ್ಕಕೆ ಬಿದ್ದು ಗಾಯಗೊಂಡಿದ್ದರು. ಮೃತರು ಪತ್ನಿ ಖದೀಜ, ಮಕ್ಕಳಾದ ಫೈಸಲ್, ನೌಫಲ್, ನವಾಜ್, ನಬೀರಾ, ಶಬ್ನಂ, ಅಳಿಯ ಮತ್ತು ಸೊಸೆಯಂ ದಿರಾದ ಇಬ್ರಾಹಿಂ ಬಂದ್ಯೋಡು, ಅಶ್ರಫ್ ಕಟ್ಟತ್ತಡ್ಕ, ಜಸೀಲಾ, ಸಹೋದರಿಯರಾದ ಜಸೀಲಾ, ರುಖ್ಯಾ, ಸುಹರಾ, ಆಯಿಷಾ, ಖದೀಜಾ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.

You cannot copy contents of this page