ಹಾನಿಗೊಂಡು ಪದೇ ಪದೇ ಮುಚ್ಚುಗಡೆಗೊಳ್ಳುತ್ತಿರುವ ಹೊಸಂಗಡಿ ರೈಲ್ವೇ ಗೇಟ್: ಸಾರ್ವಜನಿಕರ ಸಂಚಾರಕ್ಕೆ ಸಮಸ್ಯೆ

ಮಂಜೇಶ್ವರ: ಹೊಸಂಗಡಿ ರೈಲ್ವೇ ಗೇಟ್ ಹಾನಿಗೀಡಾಗಿ ಪದೇ ಪದೇ ಗಂಟೆಗಳ ಕಾಲ ಮುಚ್ಚುತ್ತಿ ರುವುದರಿಂದ ಬಂಗ್ರಮAಜೇಶ್ವರ ರಸ್ತೆಯಲ್ಲಿ ತೆರಳುವ ನೂರಾರು ವಾಹನಗಳ ಸಂಚಾರಕ್ಕೆ ಅಡಚಣೆ ಉಂಟಾಗಿ ಜನರು ತೊಂದರೆಗೀಡಾ ಗುತ್ತಿದ್ದಾರೆ. ಮೊನ್ನೆ ರಾತ್ರಿ ರೈಲು ಹಾದು ಹೋದ ಬಳಿಕ ಗೇಟ್ ತೆರೆಯಲು ಸಾಧ್ಯವಾಗದೆ ನಿನ್ನೆ ಬೆಳಿಗ್ಗೆ ತನಕ ಮುಚ್ಚಿಕೊಂಡಿದ್ದು, ಸುಮಾರು ೧೦ಗಂಟೆಗೆ ದುರಸ್ಥಿಗೊಳಿಸಿ ತೆರೆಯಲಾಗಿದೆ . ಈ ಹಿಂದೆ ಕೂಡಾ ಹಲವು ಭಾರಿ ಇದೇ ರೀತಿ ಮುಚ್ಚಿ ಕೊಂಡಿರುವುದಾಗಿ ಹೇಳಲಾಗುತ್ತಿದೆ. ಮುಚ್ಚುಗಡೆಗೊಂಡಲ್ಲಿ ಬಂಗ್ರ ಮಂಜೇಶ್ವರ ಪರಿಸರ ಪ್ರದೇಶಕ್ಕೆ ಸಂಚರಿಸುವ ನೂರಾರು ಮಂದಿ ಮಂಜೇಶ್ವರ ಹತ್ತನೇ ಮೈಲು ಹಾಗೂ ಇತರ ಒಳ ರಸ್ತೆಯಿಂದ ಸುತ್ತು ಬಳಸಿ ಸಂಚರಿಸಬೇಕಾದ ಅವಸ್ಥೆ ಉಂ ಟಾಗುತ್ತಿರುವುದಾಗಿ ಸಾರ್ವಜನಿಕರು ದೂರಿದ್ದಾರೆ.
ಒಳ ಪೇಟೆೆಯಲ್ಲಿ ಪೊಲೀಸ್ ಸ್ಟೇಶನ್, ವಿದ್ಯುತ್ ಕಚೇರಿ, ವಿಲೇಜ್ ಕಚೇರಿ, ಬ್ಯಾಂಕ್‌ಗಳು, ಸರಕಾರಿ ಆಸ್ಪತ್ರೆ, ಶಾಲೆಗಳು ಸಹಿತ ಹಲವು ಸರಕಾರಿ ಕಚೇರಿಗಳು ಒಳಗೊಂಡ ಪ್ರದೇಶವಾಗಿದೆ. ವ್ಯವಸ್ಥಿತ ಗೇಟ್‌ನ್ನು ನಿರ್ಮಿಸಿ ಹಾನಿಗೀಡಾಗದಂತೆ ಸಂ ಬಂಧಪಟ್ಟ ಅಧಿಕಾರಿಗಳು ಗಮನ ಹರಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

You cannot copy contents of this page