ಜ್ಯೂಸ್‌ನಲ್ಲಿ ಮದ್ಯಸೇರಿಸಿ ನೀಡಿ ಯುವತಿಗೆ ದೌರ್ಜನ್ಯ ದೃಶ್ಯಗಳನ್ನು ಸೆರೆಹಿಡಿದ ಗೆಳತಿ ಹಾಗೂ ಗೆಳೆಯ ಸೆರೆ

ತಿರುವನಂತಪುರ: ಕೋವಳಂನಲ್ಲಿ ಜ್ಯೂಸ್ ಗೆ ಮದ್ಯ ಬೆರೆಸಿ ನೀಡಿ ಯುವತಿಯನ್ನು ಲೈಂಗಿಕವಾಗಿ ದೌರ್ಜನ್ಯ ಗೈದ ಪ್ರಕರಣದಲ್ಲಿ ಯುವತಿಯ ಗೆಳತಿ ಹಾಗೂ ಗೆಳೆಯನನ್ನು  ಕೋವಳಂ ಪೊಲೀಸರು ಬಂಧಿಸಿದ್ದಾರೆ.  ಎರ್ನಾಕುಳಂ ಖಾಸಗಿ ಆಸ್ಪತ್ರೆಯಲ್ಲಿ ಉದ್ಯೋಗದಲ್ಲಿರುವ ಯುವತಿಯನ್ನು ಕೋವಳಂನ ಖಾಸಗಿ ಹೋಟೆಲ್‌ನಲ್ಲಿ ದೌರ್ಜನ್ಯಗೈಯ್ಯ ಲಾಗಿದೆ. ಖಾಸಗಿ ಆಯುರ್ವೇದ ಆಸ್ಪತ್ರೆಯಲ್ಲಿ ಥೆರಫಿಸ್ಟ್ ಆಗಿ ಉದ್ಯೋಗದಲ್ಲಿರುವ ಮಲಪ್ಪುರಂ ಈಶ್ವರಮಂಗಲ ನಿವಾಸಿ ಶರತ್ (೨೮), ಈತನ ಗೆಳತಿ ಮಣ್ಣಾರ್ ಕಾಡ್‌ನ ಸೂರ್ಯ (೩೩) ಎಂಬಿವರನ್ನು ಸೆರೆಹಿಡಿಯಲಾಗಿದೆ. ಕಳೆದ ೧೭ರಂದು ಘಟನೆ ನಡೆದಿದೆ.  ಶ್ರೀಪದ್ಮನಾಭ ಸ್ವಾಮಿ ಕ್ಷೇತ್ರ  ದರ್ಶನಕ್ಕೆಂದು ಯುವತಿಯನ್ನು ಸೂರ್ಯ ಕೋವಳಂಗೆ ಕರೆಸಿದ್ದಳು. ಬಳಿಕ ಶರತ್ ಇವರಿಗೆ ಕೋವಳಂನ ಹೋಟೆಲ್‌ನಲ್ಲಿ ಕೊಠಡಿ ಸಿದ್ಧಪಡಿಸಿದ್ದರು. ಶರತ್ ಜ್ಯೂಸ್‌ನಲ್ಲಿ ಮದ್ಯಬೆರೆಸಿ ಬಲವಂತವಾಗಿ ಕುಡಿಸಿ  ಯುವತಿ ಅರೆಪ್ರಜ್ಞಾವಸ್ಥೆಯಲ್ಲಾದಾಗ ದೌರ್ಜನ್ಯಗೈದಿರುವುದಾಗಿಯೂ ಈ ದೃಶ್ಯಗಳನ್ನು ಸೂರ್ಯ ಮೊಬೈಲ್‌ನಲ್ಲಿ ಸೆರೆಹಿಡಿದಿರುವುದಾಗಿಯೂ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.

RELATED NEWS

You cannot copy contents of this page