ಕಯ್ಯಾರ್ ಚರ್ಚ್‌ನಲ್ಲಿ ಸಂಭ್ರಮದ ಕ್ರಿಸ್ಮಸ್

ಕಯ್ಯಾರ್: ಯೇಸುಕ್ರಿಸ್ತನ ಜನ್ಮದಿನವನ್ನು ಕ್ರೈಸ್ತ ಬಾಂಧವರು ಇಂದು ಸಂಭ್ರಮದಿಂದ ಆಚರಿಸಿದರು. ಹಬ್ಬದಂಗವಾಗಿ ನಿನ್ನೆ ರಾತ್ರಿ ಚರ್ಚ್‌ಗಳಲ್ಲಿ  ವಿಶೇಷಬಲಿಪೂಜೆನೆರವೇರಿತು. ಕಯ್ಯಾರು ಕ್ರಿಸ್ತರಾಜ ದೇವಾಲಯದಲ್ಲಿನಡೆದ ಬಲಿಪೂಜೆಯನ್ನು ಮಂಗಳೂರು ಜೆಪ್ಪು ಸೆಮಿನರಿಯ ಪ್ರಾಧ್ಯಾಪಕ ಫಾದರ್ ಲಿಯೊ ಲಸ್ರಾದೊ ದಿವ್ಯ ಬಲಿ ಪೂಜೆ ನೆರವೇರಿಸಿ ಸಂದೇಶ ನೀಡಿದರು. ರಾಂಚಿ ಸೆಮಿನರಿಯ ಪ್ರಾಧ್ಯಾಪಕ ಫಾ| ಜೋನ್ ಕ್ರಾಸ್ತ, ಕೊಹಿಮಾ ವಲಯದ ಜೆಜ್ವಿತ್ ಧರ್ಮಗುರು ನ್ಯಾಯವಾದಿ, ಫಾ| ರವಿ ಸಾಗರ್ ಎಸ್.ಜೆ. ಕಯ್ಯಾರ್ ಕ್ರಿಸ್ತರಾಜ ದೇವಾಲಯದ ಧರ್ಮ ಗುರು ಫಾದರ್ ವಿಶಾಲ್ ಮೋನಿಸ್ ಪಾಲ್ಗೊಂಡರು. ಕ್ರಿಸ್ಮಸ್ ಕ್ಯಾರಲ್ಸ್ ಹಾಗೂ ಬಲಿ ಪೂಜೆಯ ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

You cannot copy contents of this page