ಬೈಕ್ ಢಿಕ್ಕಿ ಹೊಡೆದು ಕೃಷಿಕ ಮೃತ್ಯು: ದೇಲಂಪಾಡಿ ಪರಿಸರದಲ್ಲಿ ಶೋಕಸಾಗರ

ಅಡೂರು:  ಬೈಕ್ ಢಿಕ್ಕಿ ಹೊಡೆದು ಕೃಷಿಕರೊಬ್ಬರು ಮೃತಪಟ್ಟ ದಾರುಣ ಘಟನೆ ದೇಲಂಪಾಡಿಯಲ್ಲಿ ಶೋಕಸಾಗರ ಸೃಷ್ಟಿಸಿದೆ.

ದೇಲಂಪಾಡಿ ಬಳಿಯ ಬೆಳ್ಳಿ ಪ್ಪಾಡಿ ದೇವರಗುಂಡ ನಿವಾಸಿ ಪುರು ಷೋತ್ತಮ ಗೌಡ (೭೨) ಎಂಬವರು ಮೃತಪಟ್ಟ ದುರ್ದೈವಿಯಾಗಿದ್ದಾರೆ. ನಿನ್ನೆ ಮಧ್ಯಾಹ್ನ ವೇಳೆ ಜಾಲ್ಸೂರಿನಲ್ಲಿ ಅಪಘಾತ ಸಂಭವಿಸಿದೆ.  ಜಾಲ್ಸೂರಿನ ಅರಣ್ಯ ತಪಾಸಣಾ ಚೆಕ್‌ಪೋಸ್ಟ್ ಸಮೀಪ ರಸ್ತೆ ದಾಟುತ್ತಿದ್ದ ಪುರುಷೋ ತ್ತಮ ಗೌಡರಿಗೆ ಪುತ್ತೂರು ಭಾಗದಿಂದ ಬಂದ ಬೈಕ್ ಢಿಕ್ಕಿ ಹೊಡೆದಿತ್ತು. ಇದರಿಂದ ತಲೆಗೆ ಗಂಭೀರಗಾಯ ಗೊಂಡ ಅವರನ್ನು ಸ್ಥಳೀಯರು ಕೂಡಲೇ ಸುಳ್ಯದ ಆಸ್ಪತ್ರೆಗೆ  ತಲುಪಿಸಿ ಪ್ರಥಮ ಚಿಕಿತ್ಸೆ ಕೊಡಿಸಲಾಯಿತು. ಆದರೆ ಗಾಯ ಗಂಭೀರವಾಗಿದ್ದ ಹಿನ್ನೆಲೆಯಲ್ಲಿ ಮಂಗಳೂರಿನ ಆಸ್ಪತ್ರೆಗೆ ಕರೆದೊ ಯ್ಯುತ್ತಿದ್ದ ವೇಳ ದಾರಿ ಮಧ್ಯೆ ನಿಧನ ಸಂಭವಿಸಿದೆ. ಮೃತದೇಹವನ್ನು ಸ್ವ-ಗೃಹಕ್ಕೆ ತಲುಪಿಸಿದ ಬಳಿಕ ಅಂತ್ಯಸಂಸ್ಕಾರ ನಡೆಸಲಾಯಿತು. ಮೃತರು ಪತ್ನಿ ಸವಿತ, ಪುತ್ರ ತಿಲಕ್ (ಆಟೋರಿಕ್ಷಾ ಚಾಲಕ), ಸೊಸೆ ವೀಣಾಕುಮಾರಿ, ಸಹೋದರ ಚಂದ್ರಶೇಖರ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

RELATED NEWS

You cannot copy contents of this page