ಮದ್ರಸ ವಿದ್ಯಾರ್ಥಿನಿಯನ್ನು ಬಿಗಿದಪ್ಪಿದ ಮೀನುಮಾರಾಟಗಾರ ಸೆರೆ

ಬದಿಯಡ್ಕ: ಮದ್ರಸಕ್ಕೆ ತೆರಳುತ್ತಿದ್ದ ವಿದ್ಯಾರ್ಥಿನಿಯನ್ನು ಅಪ್ಪಿ ಹಿಡಿದು ಮೀನು ಮಾರಾಟಗಾರನನ್ನು ಬದಿಯಡ್ಕ ಪೊಲೀಸರು ಪೋಕ್ಸೋ ಪ್ರಕಾರ ಸೆರೆಹಿಡಿದಿದ್ದಾರೆ.

ಶೇಣಿ ಪದ್ಯಾಣದ ಹಂಸ (೫೫) ಎಂಬಾತ ಬಂಧಿತ ಆರೋಪಿಯಾ ಗಿದ್ದಾನೆ. ಈತನಿಗೆ ರಿಮಾಂಡ್ ವಿಧಿಸಲಾಗಿದೆ.  ಕಳೆದ ದಿನ ಬೆಳಿಗ್ಗೆ ಘಟನೆ ನಡೆದಿದೆ. ಬಾಲಕಿ ನಡೆದು ಹೋಗುತ್ತಿದ್ದ ವೇಳೆ ಮೀನು ಮಾರಾಟಕ್ಕೆ ತಲುಪಿದ ಹಂಸ ಅಪ್ಪಿಹಿಡಿದನೆಂದು ದೂರಲಾಗಿದೆ. ಬಾಲಕಿ ಮದ್ರಸಕ್ಕೆ  ತೆರಳಿ ಮನೆಗೆ  ತಲುಪಿ ತಾಯಿಯಲ್ಲಿ ವಿಷಯ ತಿಳಿಸಿದ್ದಳು. ಬಳಿಕ ಪೊಲೀಸರಿಗೆ ದೂರು ನೀಡಲಾಗಿದೆ.

RELATED NEWS

You cannot copy contents of this page