ಆಸ್ಪತ್ರೆಯಲ್ಲಿ ಪತ್ನಿಯ ಆರೈಕೆಗಾಗಿ ತಲುಪಿದ ಪತಿ ಹೃದಯಾಘಾತದಿಂದ ನಿಧನ

ಕಾಸರಗೋಡು: ಚಿಕಿತ್ಸೆಯ ಲ್ಲಿರುವ ಪತ್ನಿಯ ಆರೈಕೆಗಾಗಿ ತಲುಪಿದ ಪತಿ ಹೃದಯಾ ಘಾತದಿಂದ ಆಸ್ಪತ್ರೆಯಲ್ಲೇ ಮೃತಪಟ್ಟರು. ಮಾವುಂಗಾಲ್‌ನ ಆಟೋ ಚಾಲಕ ಪುದಿಯ ಕಂಡ ನಿವಾಸಿ ಅಸೀಸ್ (೫೮)  ಪರಿಯಾರಂ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಹೃದಯದ ವಾಲ್ವ್ ಬದಲಿ ಶಸ್ತ್ರಚಿಕಿತ್ಸೆ ಮುಗಿಸಿ ಐಸಿಯುವಿನಲ್ಲಿರುವ ಪತ್ನಿ ಸುಬೈದರ ಆರೈಕೆಗಾಗಿ ಇವರು ಆಸ್ಪತ್ರೆಯಲ್ಲಿದ್ದರು. ಈ ಮಧ್ಯೆ ನಿನ್ನೆ ಬೆಳಿಗ್ಗೆ ಆಸ್ಪತ್ರೆ ಯಲ್ಲೇ ಹೃದಯಾಘಾತ ವುಂಟಾಗಿದೆ. ಕೂಡಲೇ ಕಾರ್ಡಿಯಾಕ್ ಐಸಿಯುವಿಗೆ ತಲುಪಿಸಲಾಗಿತ್ತು. ಮಧ್ಯಾಹ್ನದ ವೇಳೆ ಮೃತಪಟ್ಟರು. ಮೃತ ದೇಹವನ್ನು ಮಾವುಂ ಗಾಲ್ ಪೇಟೆಯಲ್ಲೂ ಬಳಿಕ ಪುದಿಯಕಂಡ ವಂದೇ ಮಾತರಂ ನಿಲ್ದಾಣ ಪರಿಸರ ದಲ್ಲೂ ಸಾರ್ವಜನಿಕ ದರ್ಶ ನಕ್ಕಿರಿಸಲಾಯಿತು.  ಮೃತರು ಪತ್ನಿ, ಮಕ್ಕಳಾದ ಕೈರುನ್ನೀಸಾ, ನಸೀಬ್, ಅಳಿಯ ಬಶೀರ್, ಸೊಸೆ ಶಂಸೀನಾ, ಸಹೋದರ ಕರೀಂ, ಸಹೋದರಿ ಖದೀಜ ಹಾಗೂ ಬಂಧು-ಮಿತ್ರರನ್ನು ಅಗಲಿದ್ದಾರೆ.

RELATED NEWS

You cannot copy contents of this page