ಪಿಎಂಜಿಎಸ್‌ವೈ: ಎರಡು ರಸ್ತೆಗಳ ಕಾಮಗಾರಿ ಉದ್ಘಾಟನೆ

ಮಂಜೇಶ್ವರ: ಪಿ.ಎಂ.ಜಿ.ಎಸ್.ವೈ ಯೋಜನೆಯಲ್ಲಿ ೬.೪೧ ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಗೊಳಿಸುವ ಎರಡು ರಸ್ತೆಗಳ ಕಾಮಗಾರಿಯನ್ನು ಸಂಸದ ರಾಜ್‌ಮೋಹನ್ ಉಣ್ಣಿತ್ತಾನ್ ಶಿಲಾನ್ಯಾಸಗೈದರು. ನಂದಾರ್ ಪದವು- ಪೊಯ್ಯತ್ತಬೈಲು, ದೈಗೋಳಿ ಮೀಯಪದವು ರಸ್ತೆ ಕಾಮಗಾರಿಗೆ ಶಿಲಾನ್ಯಾಸ ಗೈಯ್ಯಲಾಗಿದೆ. ಶಾಸಕ ಎಕೆಎಂ ಅಶ್ರಫ್ ಅಧ್ಯಕ್ಷತೆ ವಹಿಸಿದ್ದರು. ವರ್ಕಾಡಿ ಪಂ. ಅಧ್ಯಕ್ಷೆ ಭಾರತಿ ಸ್ವಾಗತಿಸಿದರು. ಮಿತ್ರಾ ವರದಿ ಮಂಡಿಸಿದರು. ಜನಪ್ರತಿನಿಧಿಗಳಾದ ಮೊಯ್ದೀನ್ ಕುಂಞಿ, ರಾಧಾಕೃಷ್ಣ ಭಟ್, ಉಮ್ಮರ್ ಬೋರ್ಕಳ, ಆಶಾಲತಾ, ಪದ್ಮಾವತಿ, ಇಬ್ರಾಹಿಂ, ಅಬ್ದುಲ್ ಮಜೀದ್ ಬಿ.ಎ, ನಾರಾಯಣ ತುಂಗ, ಹರ್ಷಾದ್ ವರ್ಕಾಡಿ, ಅಝೀಜ್ ಮೊಹಮ್ಮದ್ ಮಜಾಲು, ಸದಾಶಿವ ಕೆ, ಧೂಮಪ್ಪ ಶೆಟ್ಟಿ ಪಾವೂರು, ಸಿದ್ದಿಖ್ ಬದಿಯಾರ್, ಜಿ. ರಾಮ ಭಟ್ ಉಪಸ್ಥಿತರಿದ್ದರು. ಮೀಂಜ ಪಂ. ಅಧ್ಯಕ್ಷೆ ಸುಂದರಿ ಆರ್. ಶೆಟ್ಟಿ ವಂದಿಸಿದರು.

RELATED NEWS

You cannot copy contents of this page