ಎಂಡಿಎಂಎ ಮಾರಾಟಕ್ಕೆ ತಲುಪಿದ ಉಪ್ಪಳ ನಿವಾಸಿ ಉಳ್ಳಾಲದಲ್ಲಿ ಸೆರೆ

ಮಂಜೇಶ್ವರ: ಎಂಡಿಎಂಎ ಮಾರಾ ಟಕ್ಕೆ ತಲುಪಿದ ಉಪ್ಪಳ ನಿವಾಸಿಯನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ. ಮಾದಕ ವಸ್ತು ಪಡೆಯಲು ತಲುಪಿದ ವ್ಯಕ್ತಿಗಳು ಈ ವೇಳೆ ಪರಾರಿಯಾಗಿದ್ದಾರೆ. 22ರ ಹರೆಯದ ಶೇಖ್ ಮುಹಮ್ಮದ್ ಕೈಫ್ ಎಂಬಾತ ಬಂಧಿತ ಆರೋಪಿ ಯಾಗಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ. ನಿನ್ನೆ ಸಂಜೆ ತಲಪಾಡಿ ಕೆ.ಸಿ ರೋಡ್‌ನ ಫಲಾಹ್ ಶಾಲೆ ಬಸ್ ನಿಲಾಣ ಸಮೀಪದಿಂದ ಯುವಕನನ್ನು ಸೆರೆ ಹಿಡಿಯಲಾಗಿದೆ. ಪೊಲೀಸರನ್ನು ಕಂಡು ಶಮೀರ್ ಕಾಂಬ್ಳೆ, ಜಾವಿದ್ ಎಂಬಿವರು ಬೈಕ್‌ನಲ್ಲಿ ಪರಾರಿಯಾಗಿ ದ್ದಾರೆಂದು ಪೊಲೀಸರು ತಿಳಿಸಿದ್ದಾರೆ. ಶೇಖ್ ಮುಹಮ್ಮದ್ ಕೈಫ್‌ನ ಕೈಯಲ್ಲಿದ್ದ 11 ಗ್ರಾಂ ಎಂಡಿಎಂಎ, ತಕ್ಕಡಿ, 5೦೦ ರೂ, ಮೊಬೈಲ್ ಫೋನ್ ಎಂಬಿವುಗಳನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಶೇಖ್ ಮುಹ ಮ್ಮದ್ ಕೈಫ್‌ನನ್ನು ನ್ಯಾಯಾಲಯದಲ್ಲಿ ಹಾಜರುಪಡಿಸಲಾಯಿತು.

You cannot copy contents of this page