ಅಶ್ರಫ್ ಪಚ್ಲಂಪಾರೆ ಮನೆಗೆ ಆಕ್ರಮಣ : ಆರೋಪಿಗಳ ಬಂಧನಕ್ಕೆ ಕ್ರಿಯಾ ಸಮಿತಿ ಒತ್ತಾಯ

ಉಪ್ಪಳ: ಮಂಗಲ್ಪಾಡಿ ಪಂಚಾಯತ್ 2ನೇ ವಾರ್ಡ್‌ನಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ ಅಶ್ರಫ್ ಪಚ್ಲಂಪಾರೆಯವರ ಮನೆಗೆ ಆಕ್ರಮಣಗೈದು ನಾಲ್ಕು ತಿಂಗಳ ಗರ್ಭಿಣಿಯಾದ ಮಹಿಳೆಯನ್ನು, ಮಕ್ಕಳನ್ನು ಆಕ್ರಮಿಸಿ ದಾಂಧಲೆ ನಡೆಸಿದ ಅಕ್ರಮಿಗಳನ್ನು ರಕ್ಷಿಸಲಿರುವ ಪೊಲೀಸರ ಕ್ರಮವನ್ನು ಉಪೇಕ್ಷಿಸಬೇಕೆಂದು ಕ್ರಿಯಾ ಸಮಿತಿ ಆಗ್ರಹಿಸಿದೆ. ಎರಡುಮೂರು ಕಿಲೋಮೀಟರ್ ದೂರದಿಂದ ಬಂದ ಅಕ್ರಮಿಗಳು ಗೇಟ್‌ನ ಹೊರಗಿನಿಂದ ಮನೆಗೆ ಪಟಾಕಿಗಳನ್ನೆಸೆದು ಬಳಿಕ ಒಳಗೆ ನುಗ್ಗಿ ಆಕ್ರಮಿಸಿದ್ದು, ಗಾಯಗೊಂಡ ಮಹಿಳೆಯರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಮಹಿಳೆಯರ ಮಾನಹಾನಿ ಹಾಗೂ ಮನೆಗೆ ನಷ್ಟ ಉಂಟುಮಾಡಿದ ಅಕ್ರಮಿಗಳ ವಿರುದ್ಧ ಕೌಂಟರ್ ಕೇಸ್ ದಾಖಲಿಸಿ ಅವರನ್ನು ಪಾರುಮಾಡಲಿ ರುವ ಯತ್ನ ಪೊಲೀಸರು ನಡೆಸುತ್ತಿರುವು ದಾಗಿ ಕ್ರಿಯಾ ಸಮಿತಿ ಆರೋಪಿಸಿದೆ.

ಆರೋಪಿಗಳನ್ನು ಕೂಡಲೇ ಬಂಧಿಸಬೇಕೆಂದು ಆಗ್ರಹಿಸಿದ್ದು, ಇಲ್ಲದಿದ್ದರೆ ಮಂಜೇಶ್ವರ ಠಾಣೆಗೆ ಮಾರ್ಚ್ ನಡೆಸಲಾಗುವುದೆಂದು ಸಮಿತಿ ಎಚ್ಚರಿಸಿದೆ. ಪದಾಧಿಕಾರಿಗಳಾಗಿ ನಾರಾಯಣನ್ ಕೆ.ಯು. (ಅಧ್ಯಕ್ಷ), ಉಪಾಧ್ಯಕ್ಷರಾಗಿ ಮಜೀದ್, ರಹೀಂ, ಸಂಚಾಲಕರಾಗಿ ಸತ್ತಾರ್ ಐ.ಕೆ., ಜೊತೆ ಸಂಚಾಲಕರಾಗಿ ಸುಂದರ ಸಿ, ಅಶ್ರಫ್ ಆಯ್ಕೆಯಾದರು. ರಾಮ, ಅಬ್ದುಲ್ಲ, ಅಲ್ತಾಫ್, ಅಬ್ಬಾಸ್, ಮುಹಮ್ಮದ್ ಇರ್ಷಾದ್ ಮಾತನಾಡಿದರು.

RELATED NEWS

You cannot copy contents of this page