ಕುಂಬಳೆ: ಹೊಳೆಯಿಂದ ಅನಧಿಕೃತವಾಗಿ ಸಂಗ್ರಹಿಸಿದ ಎರಡು ಲೋಡ್ ಹೊಯ್ಗೆಯನ್ನು ಎಸ್.ಐ ಶ್ರೀಜೇಶ್ ನೇತೃತ್ವದ ಕುಂಬಳೆ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ಒಂದು ಟಿಪ್ಪರ್ ಲಾರಿ ಹಾಗೂ ಓಮ್ನಿ ವ್ಯಾನ್ ವಶಪಡಿಸಿ ಇಬ್ಬರನ್ನು ಬಂಧಿಸಲಾಗಿದೆ.
ಓಮ್ನಿ ವ್ಯಾನ್‌ನಲ್ಲಿ ಸಾಗಿಸುತ್ತಿದ್ದ ಹೊಯ್ಗೆಯನ್ನು ಆರಿಕ್ಕಾಡಿ ಕೆ.ಪಿ. ರೆಸಾರ್ಟ್ ಬಳಿಯಿಂದ ವಶಪಡಿಸಿಕೊಂಡಿದ್ದು ಅದರಲ್ಲಿದ್ದ ಆರಿಕ್ಕಾಡಿ ನಿವಾಸಿ ಮನ್ಸೂರ್ ಅಲಿ (40) ಎಂಬಾತನನ್ನು ಬಂಧಿಸಲಾಗಿದೆ. ಇದರ ಹೊರತು ವಳಯಂಕಡವು ಭಾಗದಿಂದ ಬಂದ್ಯೋಡು ಭಾಗಕ್ಕೆ ಹೊಯ್ಗೆ ಸಾಗಿಸುತ್ತಿದ್ದ ಟಿಪ್ಪರ್ ಲಾರಿಯನ್ನು ವಶಪಡಿಸಲಾಗಿದೆ. ಲಾರಿಯಲ್ಲಿದ್ದ ಮೀಂಜ ನಿವಾಸಿ ಶೇಕ್ ಅಬ್ದುಲ್ಲ ಕೆ.ಎಚ್ (31) ಎಂಬಾತನನ್ನು ಬಂಧಿಸಲಾಗಿದೆ.







