ಅನಂತಪುರ ಕೈಗಾರಿಕಾ ಎಸ್ಟೇಟ್‌ನ ಫ್ಲೈವುಡ್ ಫ್ಯಾಕ್ಟರಿಯಲ್ಲಿ ಬೆಂಕಿ ಅನಾಹುತ

ಕುಂಬಳೆ: ಅನಂತಪುರ ಕೈಗಾರಿಕಾ ಎಸ್ಟೇಟ್‌ನಲ್ಲಿ ಇಂದು ಮುಂಜಾನೆ ಸಂಭವಿಸಿದ ಬೆಂಕಿ ಅನಾಹುತದಲ್ಲಿ  ಭಾರೀ ನಾಶನಷ್ಟ ಸಂಭವಿಸಿರು ವುದಾಗಿ ವರದಿಯಾಗಿದೆ. ಎಸ್ಟೇಟ್ ನಲ್ಲಿರುವ ಮಾರ್ಕ್ ವುಡ್ ಫ್ಲೈವುಡ್ ಫ್ಯಾಕ್ಟರಿಯಲ್ಲಿ ಮುಂಜಾನೆ 4 ಗಂಟೆ ವೇಳೆ ಬೆಂಕಿ ಅನಾಹುತವುಂಟಾಗಿದೆ. ಕಾಸರ ಗೋಡು, ಉಪ್ಪಳ, ಕಾಞಂಗಾಡ್ ಹಾಗೂ ಕುತ್ತಿಕೋಲ್ ಅಗ್ನಿಶಾಮಕದ ಎಂಟು ಯೂನಿಟ್‌ಗಳು ಗಂಟೆಗಳ ಕಾಲ ನಡೆಸಿದ ಕಾರ್ಯಾ ಚರಣೆಯಿಂದ ಬೆಂಕಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ. ಪೇರಾಲ್‌ಕಣ್ಣೂರಿನ ಅಬ್ದುರಹಿಮಾನ್ ರ ಮಾಲಕತ್ವದಲ್ಲಿ ರುವ ಫ್ಯಾಕ್ಟರಿ ಇದಾಗಿದೆಯೆಂದು ಹೇಳಲಾಗುತ್ತಿದೆ. ನಿನ್ನೆ ರಾತ್ರಿ 12 ಗಂಟೆ ವರೆಗೆ ಈ ಫ್ಯಾಕ್ಟರಿಯಲ್ಲಿ ಕೆಲಸ ನಡೆಯುತ್ತಿತ್ತೆನ್ನಲಾಗಿದೆ. ಅಂತರ ಕಾರ್ಮಿಕರು ಅಲ್ಲಿಂದ ಮರಳಿದ್ದರು.  ಇಂದು ಮುಂಜಾನೆ ಫ್ಯಾಕ್ಟರಿಯಲ್ಲಿ ಬೆಂಕಿ ದುರ್ಘಟನೆಯುಂಟಾಗಿದೆ. ದುರ್ಘಟನೆಯಿಂದ ಉಂಟಾದ ನಾಶನಷ್ಟ ಲೆಕ್ಕ ಅಂದಾಜಿಸಲಾಗಿಲ್ಲ.

You cannot copy contents of this page