ಸಮಸ್ತದ 100ನೇ ವಾರ್ಷಿಕಾಚರಣೆ: ನಾಳೆ ಜಿಲ್ಲೆಯಲ್ಲಿ ಸಾರಿಗೆ ಸಂಚಾರದಲ್ಲಿ ವ್ಯತ್ಯಯ

ಕಾಸರಗೋಡು: ಸಮಸ್ತದ 100ನೇ ವಾರ್ಷಿಕಾಚರಣೆ ಯಂಗವಾಗಿ ನಾಳೆ ಕಾಸರಗೋಡು ಜಿಲ್ಲೆಯಲ್ಲಿ ಸಾರಿಗೆ ವ್ಯತ್ಯಯ ಏರ್ಪಡಿಸಿರುವುದಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ. ಕಣ್ಣೂರು ಭಾಗದಿಂದ ಕಾಸರಗೋಡು ಭಾಗಕ್ಕೆ ಆಗಮಿಸುವ ಹೆವಿ ವಾಹನಗಳು ತಳಿಪರಂಬ ಮೂಲಕ ಮಲೆನಾಡು ಹೆದ್ದಾರಿಯಲ್ಲಾಗಿ ಸಾಗಬೇಕಾಗಿದ್ದು, ಮಂಗಳೂರಿನಿಂದ ಬರುವ ವಾಹನಗಳು ಕುಂಬಳೆ ಭಾಗದಿಂದ ಮಲೆನಾಡು ಹೆದ್ದಾರಿ ಮೂಲಕ ಸಾಗಬೇಕಾಗಿದೆ. ಕಾರ್ಯಕ್ರಮಕ್ಕೆ ತೆರಳುವ ವಾಹನಗಳು ಪೆರಿಯ, ಪೊಯಿನಾಚಿ ಎಂಬೆಡೆಗಳಿಂದ ಸರ್ವೀಸ್ ರಸ್ತೆ ಮೂಲಕ ಬಂದು ಜನರನ್ನು ಇಳಿಸಿ ಪಾರ್ಕಿಂಗ್ ಏರಿಯಾಕ್ಕೆ ತೆರಳಬೇಕಾಗಿದೆ. ಕಾರ್ಯಕ್ರಮದಲ್ಲಿ ಭಾಗವಹಿಸುವ ವ್ಯಕ್ತಿಗಳು ಸರ್ವೀಸ್ ರಸ್ತೆ, ಅಂಡರ್ ಪ್ಯಾಸೇಜ್ ಎಂಬಿವುಗಳನ್ನು ಕಾಲ್ನಡೆಗಾಗಿ ಉಪಯೋಗಿ ಸಬೇಕಾಗಿದೆ. ಯಾವುದೇ ಕಾರಣದಿಂದಲೂ ಕಾಲ್ನಡೆ ಪ್ರಯಾಣಿಕರು ಹೆದ್ದಾರಿಯಲ್ಲಿ ನಡೆದುಕೊಂಡು ಹೋಗಬಾರದು. ನಿರ್ದೇಶಗಳನ್ನು ಖಡ್ಡಾಯವಾಗಿ ಪಾಲಿಸಬೇಕಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ವಿ. ವಿಜಯ್ ಭರತ್‌ರೆಡ್ಡಿ ತಿಳಿಸಿದ್ದಾರೆ. ಸಮಸ್ತದ 100ನೇ ವಾರ್ಷಿಕ ಆಚರಣೆ ಕಾರ್ಯಕ್ರಮ ಪೆರಿಯದಲ್ಲಿ ನಡೆಯುತ್ತಿದೆ.

RELATED NEWS

You cannot copy contents of this page