ಕಟ್ಟಡ ನಿರ್ಮಾಣ ಕಾರ್ಮಿಕ ನೇಣು ಬಿಗಿದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ

ಕಾಸರಗೋಡು: ಕಟ್ಟಡ ನಿರ್ಮಾಣ ಕಾರ್ಮಿಕ ಮನೆ ಯೊಳಗೆ ನೇಣು ಬಿಗಿದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಹಚ್ಚಲಾಗಿದೆ. ಪುಲ್ಲೂರಿನ ವಿ. ಸಜಿತ್ (42) ಮೃತಪಟ್ಟ ಕಾರ್ಮಿಕ. ನಿನ್ನೆ ಸಂಜೆ ೪ ಗಂಟೆ ವೇಳೆ ಕಿಟಿಕಿಯ ಸರಳಿಗೆ ನೇಣು ಬಿಗಿದ ಸ್ಥಿತಿಯಲ್ಲಿ ಸಜಿತ್‌ರ ಮೃತದೇಹ ಪತ್ತೆಯಾಗಿದೆ. ಅಂಬಲತ್ತರ ಪೊಲೀಸರು ಅಸಹಜ ಸಾವಿಗೆ ಕೇಸು ದಾಖಲಿಸಿದ್ದಾರೆ.

ವಿ. ನಾರಾಯಣನ್ ಮೇಸ್ತ್ರಿ- ಕೆ.ಕೆ. ನಾರಾಯಣಿ ದಂಪತಿ ಪುತ್ರನಾದ ಇವರು ಪತ್ನಿ ಪ್ರತಿಭಾ ಪೆರ್ಲ, ಮಕ್ಕಳಾದ ಆದಿದೇವ್, ಆರಾಧ್ಯ, ಸಹೋದರರಾದ ವಿ. ಸುನಿಲ್ ಕುಮಾರ್, ವಿ. ಸುಜಿತ್, ಸಹೋದರಿ ವಿ. ಸಿಂಧು ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

You cannot copy contents of this page