ಮಂಜೇಶ್ವರ: ಮನೆಯಿಂದ ಹೊರ ಹೋದ ಯುವತಿ ವಾಪಸಾಗಲಿಲ್ಲವೆಂದು ದೂರಿ ತಾಯಿ ಮಂಜೇಶ್ವರ ಠಾಣೆಗೆ ದೂರು ನೀಡಿದ್ದಾರೆ. ತಲಪಾಡಿ ಮರಿಯಾಶ್ರಮ ಚರ್ಚ್ ಬಳಿಯ ನಿವಾಸಿ ಅಂತೋಣಿ ಸಿಲ್ವರ್ಸ್ಟಾರ್ ಡಿಸೋಜಾರ ಪುತ್ರಿ ಅನಿಶಾ ಡಿಸಿಲ್ವಾ (24) ನಾಪತ್ತೆಯಾಗಿರುವುದಾಗಿ ತಾಯಿ ಜೆಸಿಂತಾ ಮಂಜೇಶ್ವರ ಪೊಲೀಸರಿಗೆ ದೂರು ನೀಡಿದ್ದಾರೆ. ಈ ತಿಂಗಳ 5ರಂದು ಮಧ್ಯಾಹ್ನ 1 ಗಂಟೆಗೆ ಮನೆಯಿಂದ ಈಕೆ ಹೊರಕ್ಕೆ ಹೋಗಿದ್ದು, ಆದರೆ ವಾಪಸಾಗಲಿಲ್ಲ ವೆಂದು ದೂರಿನಲ್ಲಿ ತಿಳಿಸಲಾಗಿದೆ.







