ಕೊಲ್ಲಂ: ದೇಹದಲ್ಲಿ ಸೇರಿದ ಪ್ರೇತಬಾಧೆಯನ್ನು ಬಿಡಿಸಲು ತಾಯಿಯೊಂದಿಗೆ ತಲುಪಿದ 16ರ ಬಾಲಕಿಯನ್ನು ಕಪಟ ಮಂತ್ರವಾದಿ ಕೊಠಡಿಗೆ ಕೊಂಡೊಯ್ದು ದೌರ್ಜನ್ಯಗೈಯ್ಯಲೆತ್ನಿಸಿರುವುದಾಗಿ ದೂರಲಾಗಿದೆ. ಪೊಲೀಸರು ಪೋಕ್ಸೋ ಕೇಸು ದಾಖಲಿಸಿದ್ದಾರೆ. ಕೊಲ್ಲಂ ಪುತ್ತೂರ್‌ನಲ್ಲಿ ನಿನ್ನೆ ಘಟನೆ ನಡೆದಿದೆ. ವೆಂಡಾರ್ ನಿವಾಸಿಯಾದ ಮಂತ್ರವಾದಿ ಮುರಾರಿ ವಿರುದ್ಧ ಪೊಲೀಸರು ಕೇಸು ದಾಖಲಿಸಿದ್ದಾರೆ. ಪೊಲೀಸರು ಕೇಸು ದಾಖಲಿಸಿದ ಬಗ್ಗೆ ತಿಳಿದು ತಲೆಮರೆಸಿಕೊಂಡ ಮಂತ್ರವಾದಿಯ ಪತ್ತೆಗೆ ತನಿಖೆ ತೀವ್ರಗೊಳಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.







