ಕುಂಬಳೆ: ಅಪ್ರಾಪ್ತ ಬಾಲಕಿ ಮುಂದೆ ನಗ್ನತೆ ಪ್ರದರ್ಶಿಸಿದ ಪ್ರಕರಣದಲ್ಲಿ ಪೊಲೀಸರು ಪೋಕ್ಸೋ ಕೇಸು ದಾಖಲಿಸಿಕೊಂಡಿದ್ದ ಆರೋಪಿ ಸೆರೆಗೀಡಾಗಿದ್ದಾನೆ. ರಾಜಪುರಂ ನಿವಾಸಿ ಅರ್ಶಾದ್ (35) ಎಂಬಾತ ನನ್ನು ಕುಂಬಳೆ ಠಾಣೆ ಇನ್ಸ್ಪೆಕ್ಟರ್ ಟಿ.ಕೆ.ಮುಕುಂದನ್, ಎಸ್ಐ ಪ್ರದೀಪ್ ಕುಮಾರ್ ನೇತೃತ್ವದಲ್ಲಿ ಕರ್ನಾಟ ಕದಿಂದ ಸೆರೆಹಿಡಿಯಲಾಗಿದೆ. ಅರ್ಶಾದ್ ಕರ್ನಾಟಕದಿಂದ ಹಣ್ಣು ಹಂಪಲುಗಳನ್ನು ತಂದು ಕಾಞಂ ಗಾಡ್ ಭಾಗದಲ್ಲಿ ಮಾರಾಟಮಾಡುತ್ತಿದ್ದನು. ಕಳೆದ ಜನವರಿ ೮ರಂದು ಕುಂಬಳೆ ಠಾಣೆ ವ್ಯಾಪ್ತಿಯ ಪ್ರದೇಶವೊಂದರಲ್ಲಿ ಅಪ್ರಾಪ್ತ ಬಾಲಕಿಯ ಮುಂದೆ ಈತ ನಗ್ನತೆ ಪ್ರದರ್ಶಿಸಿರು ವುದಾಗಿ ದೂರಲಾಗಿದೆ. ಈ ಬಗ್ಗೆ ದೂರು ಲಭಿಸಿದ ಹಿನ್ನೆಲೆಯಲ್ಲಿ ಪೊಲೀಸರು ಅರ್ಶಾದ್ ವಿರುದ್ಧ ಫೋಕ್ಸೋಕೇಸು ದಾಖಲಿಸಿ ಕೊಂಡು ಈತನಿಗಾಗಿ ಹುಡುಕಾಟ ನಡೆಸುತ್ತಿದ್ದರು. ಇದೇ ವೇಳೆ ಈತ ಕರ್ನಾಟಕದ ಮಡಿಕೇರಿ ಕೊಡಗಿನಲ್ಲಿ ಇರುವುದಾಗಿ ಮಾಹಿತಿ ಲಭಿಸಿದ್ದು, ಇದರಂತೆ ಪೊಲೀಸರು ಅಲ್ಲಿಗೆ ತೆರಳಿ ಆರೋಪಿಯನ್ನು ಬಂಧಿಸಿದ್ದಾರೆ.






