ಪ್ರಾಕ್ಟಿಕಲ್ ಪರೀಕ್ಷೆಗೆಂದು ಮನೆಯಿಂದ ಹೋದ ವಿದ್ಯಾರ್ಥಿನಿ ನಾಪತ್ತೆ

ಬದಿಯಡ್ಕ: ಪ್ರಾಕ್ಟಿಕಲ್ ಪರೀಕ್ಷೆಗೆಂದು ತಿಳಿಸಿ ಮನೆಯಿಂದ ಹೋದ 17 ವರ್ಷದ ಪ್ಲಸ್‌ಟು ವಿದ್ಯಾರ್ಥಿನಿ ನಾಪತ್ತೆಯಾಗಿರು ವುದಾಗಿ ತಾಯಿ ಬದಿಯಡ್ಕ ಪೊಲೀಸರಿಗೆ ದೂರು ನೀಡಿದ್ದಾರೆ.

ಬದಿಯಡ್ಕ ಪೊಲೀಸ್ ಠಾಣೆ ವ್ಯಾಪ್ತಗೊಳಪಟ್ಟ ಪ್ರದೇಶ ನಿವಾಸಿ ಹಾಗೂ  ಕಾಸರಗೋಡಿನ ಶಾಲೆ ಯೊಂದರ ಪ್ಲಸ್‌ಟು ವಿದ್ಯಾರ್ಥಿನಿ ನಿನ್ನೆ ಬೆಳಿಗ್ಗೆ 7.45ಕ್ಕೆ ಪ್ರಾಕ್ಟಿಕಲ್ ಪರೀಕ್ಷೆಗೆಂದು ತಿಳಿಸಿ ಮನೆಯಿಂದ ಹೋಗಿದ್ದು, ಅನಂತರ ಮನೆಗೆ ಹಿಂತಿರುಗಿಲ್ಲವೆಂದು ತಾಯಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಇದರಂತೆ ಬದಿಯಡ್ಕ ಪೊಲೀಸರು ಮಿಸ್ಸಿಂಗ್ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.

You cannot copy contents of this page