ಅಂಗಡಿಯಿಂದ ಕಳವುಗೈದ ಪ್ರಕರಣ:ತಲೆಮರೆಸಿಕೊಂಡಿದ್ದ ಆರೋಪಿ ಸೆರೆ

ಕುಂಬಳೆ: ಎಂಟು ವರ್ಷಗಳ ಹಿಂದೆ ಕುಂಬಳೆ ಪೊಲೀಸ್ ಠಾಣೆ ವ್ಯಾಪ್ತಿಯ ಅಡ್ಕ ವಳಯಂ ರಸ್ತೆಯಲ್ಲಿರುವ ಅಂಗಡಿಯಿಂದ ಕಳವು ನಡೆಸಿದ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿ ಸೆರೆಗೀಡಾಗಿದ್ದಾನೆ. ಬೆಂಗಳೂರು ಪಗಳಡ್ಕ ಬೀಜಾರು ನಿವಾಸಿ  ಮುಹಮ್ಮದ್ ಅಸಾಸ್  ಯಾನೆ ಅಸರ್ (3೦) ಎಂಬಾತನನ್ನು ಕುಂಬಳೆ ಪೊಲೀಸರು ನಿನ್ನೆ ಮಂಗಳೂರಿನಿಂದ ಬಂಧಿಸಿದ್ದಾರೆ. ಕುಂಬಳೆ ಸಿ.ಐ ಆರ್.ಪಿ ಅನೂಪ್‌ಕೃಷ್ಣರ ನಿರ್ದೇಶ ಪ್ರಕಾರ  ಎಸ್‌ಎಚ್‌ಒ ಎಸ್.ಅನೂಪ್, ಎಸ್‌ಐ ಶಶಿ, ಸಿಪಿಒಗಳಾದ ವಸಂತನ್, ಸುಧೀಶ್ ಎಂಬಿವರು  ಸೇರಿ ಆರೋಪಿಯನ್ನು ಸೆರೆಹಿಡಿದಿದ್ದಾರೆ. 2018 ಜನವರಿ 29ರಂದು ರಾತ್ರಿ    ಶಿರಿಯ ಕುನ್ನಿಲ್‌ನ ಕೆ.ಕೆ. ಮುಹಮ್ಮದ್ ಮುಸ್ಲಿಯಾರ್‌ರ  ಮಾಲಕತ್ವದಲ್ಲಿ ವಳಯಂ ರಸ್ತೆಯಲ್ಲಿರುವ ಮದೀನ ಸ್ಟೋರ್‌ನಿಂದ ಕಳವು ನಡೆಸಲಾಗಿತ್ತು. ಅಂಗಡಿಯ ಬೀಗ ಮುರಿದು ಒಳನುಗ್ಗಿದ ಕಳ್ಳ ಮೇಜಿನಲ್ಲಿರಿಸಿದ್ದ 3೦೦೦ ರೂಪಾಯಿ, ಮೂರು ಮೊಬೈಲ್ ಫೋನ್‌ಗಳು ಹಾಗೂ ನಾಲ್ಕು ಸಾವಿರ ರೂ.ಗಳ ಸಿಗರೇಟ್ ಮೊದಲಾದವುಗಳನ್ನು ಕಳವು ನಡೆಸಿರುವುದಾಗಿ ದೂರಲಾಗಿತ್ತು. ಈ ಬಗ್ಗೆ ಕೇಸು ದಾಖಲಿಸಿ ತನಿಖೆ ನಡೆಸಿದ ಅಂದಿನ ಪೊಲೀಸ್ ಇನ್‌ಸ್ಪೆಕ್ಟರ್  ಕೆ. ಪ್ರೇಮ್‌ಸದನ್‌ರ ನೇತೃತ್ವದಲ್ಲಿ ನಡೆಸಿದ ತನಿಖೆಯಲ್ಲಿ ಆರೋಪಿಯಾದ ಮುಹಮ್ಮದ್ ಅಸಾಸ್‌ನನ್ನು ಬಂಧಿಸಲಾಗಿತ್ತು. ಈತ ಬಳಿಕ ಜಾಮೀನಿನಲ್ಲಿ ಬಿಡುಗಡೆಗೊಂಡು ತಲೆಮರೆಸಿಕೊಂಡಿದ್ದನೆಂದು ಪೊಲೀಸರು ತಿಳಿಸಿದ್ದಾರೆ. ಈತ ಕೇರಳ ಹಾಗೂ ಕರ್ನಾಟಕದಲ್ಲಿ ನಡೆದ ಹಲವು ಕಳವು ಪ್ರಕರಣ ದಲ್ಲೂ ಆರೋಪಿಯಾಗಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ.

RELATED NEWS

You cannot copy contents of this page