ಉಕ್ಕಿನಡ್ಕ ಮೆಡಿಕಲ್ ಕಾಲೇಜು ಆಸ್ಪತ್ರೆಯ ಒ.ಪಿ ಸೇವೆಗಳು ಕಾಸರಗೋಡು ಜನರಲ್ ಆಸ್ಪತ್ರೆಗೆ ಸ್ಥಳಾಂತರ

ಕಾಸರಗೋಡು: ಉಕ್ಕಿನಡ್ಕ ಮೆಡಿಕಲ್ ಕಾಲೇಜು ಆಸ್ಪತ್ರೆಯ ಒ.ಪಿ ಸೇವೆಗಳನ್ನು ಕಾಸರಗೋಡು ಜನರಲ್ ಆಸ್ಪತ್ರೆಗೆ ಸ್ಥಳಾಂತರಿಸ ಲಾಗುವುದು. ಮೆಡಿಕಲ್ ಕಾಲೇಜಿನ ಒ.ಪಿ ಸೇವೆಗಳನ್ನು ಜನರಲ್ ಆಸ್ಪತ್ರೆಗೆ  ಸ್ಥಳಾಂತರಿಸುವುದಾಗಿ  ತಿಳಿಸಿ ಪ್ರಾಂಶುಪಾಲರು ಕಾಲೇಜಿನ ಗೋಡೆಯ ಮೇಲೆ ನಿನ್ನೆ ಕನ್ನಡ ಹಾಗೂ ಮಲೆಯಾಳದಲ್ಲಿ ಮುದ್ರಿತ ನೋಟೀಸು ಅಂಟಿಸಿದ್ದಾರೆ.

ಮೆಡಿಕಲ್ ಕಾಲೇಜಿನ  ಒ.ಪಿ ಸೇವೆಗಳನ್ನು  ಸ್ಥಳಾಂತರಿಸುವುದಿಲ್ಲ ವೆಂದು ಕಳೆದವಾರ  ಮೆಡಿಕಲ್ ಕಾಲೇಜಿಗೆ  ಮೊಟ್ಟಮೊದಲ ಬಾರಿ  ಭೇಟಿ ನೀಡಿದ ಆರೋಗ್ಯ ಸಚಿವ ಜನರಿಗೆ ಭರವಸೆ ನೀಡಿದ್ದರು.  ಇದೀಗ ಸೇವೆಗಳನ್ನು ತಾತ್ಕಾಲಿಕವಾಗಿ ಸ್ಥಳಾಂತರಿಸುವುದಾಗಿ ಅಧಿಕಾರಿಗಳು ತಿಳಿಸುತ್ತಿದ್ದಾರಾದರೂ ಈ ಬದಲಾ ವಣೆ ಎಷ್ಟು ಕಾಲಕ್ಕೆ, ಯಾವಾಗ ಪುನರಾರಂಭಿಸಲಾಗುವುದು ಎಂಬುವುದಾಗಿ  ತಿಳಿಸದಿರುವುದರಿಂದ ರೋಗಿಗಳು ಆತಂಕಪಡುವಂತಾಗಿದೆ.

ಔಷಧಿಗಳು ಹಾಗೂ ವಿವಿಧ ವಿಭಾಗಗಳ ವೈದ್ಯರುಗಳ ಒ.ಪಿ ಸೇವೆಗಳು ಲಭಿಸುತ್ತಿದ್ದ ಇಲ್ಲಿ  ಪ್ರತಿದಿನ 5೦೦ರಷ್ಟು ಮಂದಿ ಚಿಕಿತ್ಸೆ  ಪಡೆಯುತ್ತಿದ್ದರೆಂದು ನಾಗರಿಕರು ತಿಳಿಸುತ್ತಿದ್ದಾರೆ.

ಎಡರಂಗ ಸರಕಾರ  ಅಕಾಡೆ ಮಿಕ್ ಬ್ಲೋಕ್‌ನಲ್ಲಿ ಮೊದಲ ಕೋವಿಡ್ ಆಸ್ಪತ್ರೆ ಹಾಗೂ ಅನಂತರ ಒ.ಪಿ ಆಸ್ಪತ್ರೆಯನ್ನು ಆರಂಭಿಸಿತ್ತು. ಯುಡಿಎಫ್ ಸರಕಾರ ಅಧಿಕಾರಕ್ಕೇ ರುವುದರೊಂದಿಗೆ ಔಷಧಿಗಳ ಲಭ್ಯತೆ ಕಡಿಮೆಯಾಗಿರುವುದಾಗಿಯೂ, ಒ.ಪಿ ಸೇವೆಗಳನ್ನು ನಿಲ್ಲಿಸುವುದಾಗಿ ವ್ಯಾಪಕ ಪ್ರಚಾರ ನಡೆದಿತ್ತೆಂದು ರೋಗಿಗಳು ಹೇಳುತ್ತಿದ್ದಾರೆ. ಇದೇ ವೇಳೆ ಎಂಬಿಬಿಎಸ್ ದ್ವಿತೀಯ ಬ್ಯಾಚ್ ಆರಂಭಿಸಲು ಅಗತ್ಯದ ಸೌಕರ್ಯ ಗಳನ್ನು ಏರ್ಪಡಿಸುವುದರಿಂದ ಒ.ಪಿ ಸೇವೆಗಳನ್ನು ಸ್ಥಳಾಂತರಿಸುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

RELATED NEWS

You cannot copy contents of this page