ಅಪ್ರಾಪ್ತರ ವಾಹನ ಚಾಲನೆ ವಿರುದ್ಧ ಕಠಿಣ ಕ್ರಮ: ಆರ್‌ಸಿ ಮಾಲಕರಿಗೆ ದಂಡ ಮಾತ್ರವಲ್ಲದೆ 6 ತಿಂಗಳು ಜೈಲು ಶಿಕ್ಷೆ

ಕಾಸರಗೋಡು: ಪ್ರಾಯಪೂರ್ತಿಯಾಗದವರು ವಾಹನ ಚಲಾಯಿಸುತ್ತಿರುವುದು ಗಂಭೀರ ಅಪಘಾತಗಳಿಗೆ ಕಾರಣವಾಗುತ್ತಿದೆ ಎಂದು ತಿಳಿದು ಬಂದ ಹಿನ್ನೆಲೆಯಲ್ಲಿ ಸರಕಾರ ಈ ಸಂಬಂಧ ಕಾನೂನುಗಳನ್ನು ಇನ್ನಷ್ಟು ಕಠಿಣಗೊಳಿಸಲು ತೀರ್ಮಾನಿಸಿದೆ. ಇದರಂಗವಾಗಿ 18 ವರ್ಷ ಪ್ರಾಯಪೂರ್ತಿಯಾಗದವರಿಗೆ ಇನ್ನು ವಾಹನಗಳನ್ನು ಚಲಾಯಿಸಲು ನೀಡಿದ ಆರ್‌ಸಿ ಮಾಲಕರು 25,೦೦೦ ರೂಪಾಯಿ ದಂಡ ಪಾವತಿ ಮಾತ್ರವಲ್ಲದೆ 6 ತಿಂಗಳು ಜೈಲು ಶಿಕ್ಷೆಯನ್ನು ಕೂಡಾ ಅನುಭವಿಸಬೇಕಾಗಿ ಬರಲಿದೆ. ಮಾತ್ರವಲ್ಲದೆ ಪ್ರಾಯಪೂರ್ತಿಯಾಗಿಲ್ಲವೆಂಬ ಹೆಸರಲ್ಲಿ ಇದುವರೆಗೆ ರಿಯಾಯಿತಿ ಲಭಿಸುತ್ತಿದ್ದ ಅಪ್ರಾಪ್ತ ವಾಹನ ಚಾಲಕರಿಗೆ ಇನ್ನುಮುಂದೆ ಜುವನೈಲ್ ಹೋಮ್‌ನಲ್ಲಿ 6 ತಿಂಗಳು ವಾಸಿಸಬೇಕಾಗಿ ಬರಲಿದೆ. ಅಲ್ಲದೆ 25 ವರ್ಷದವರೆಗೆ ಅವರಿಗೆ ಡ್ರೈವಿಂಗ್ ಲೈಸನ್ಸ್ ಮಂಜೂರು ಮಾಡಲಾಗುವುದಿಲ್ಲ.

RELATED NEWS

You cannot copy contents of this page