ಶಬರಿಮಲೆ ದೇಗುಲದಿಂದ ಕದ್ದು ಸಾಗಿಸಿದ್ದು 1.7 ಕಿಲೋ ಚಿನ್ನ

ತಿರುವನಂತಪುರ: ಶಬರಿಮಲೆ ದೇಗುಲದ  ಗರ್ಭಗುಡಿಯ ಬಾಗಿಲು ಹಾಗೂ ದ್ವಾರಪಾಲಕ ಮೂರ್ತಿಗಳ ಕವಚ ಇತ್ಯಾದಿ ಗಳಿಂದಾಗಿ ಒಟ್ಟಾರೆಯಾಗಿ 1.7 ಕಿಲೋ ಗ್ರಾಂ ಚಿನ್ನ ಕದ್ದು  ಸಾಗಿಸಲಾಗಿದೆಯೆಂದು ಈ ಪ್ರಕರಣದ ತನಿಖೆ ನಡೆಸುವ ವಿಶೇಷ  ತನಿಖಾ ತಂಡ ತಿಳಿಸಿದೆ.   ವಿಎಸ್‌ಎಸ್‌ಸಿಯಲ್ಲಿ ನಡೆಸಲಾದ ವೈಜ್ಞಾನಿಕ ಪರೀಕ್ಷೆಯ ವರದಿಯ ಆಧಾರದಲ್ಲಿ ಈ ಲೆಕ್ಕಾಚಾರ ನೀಡಲಾಗಿದೆ. ಆದರೆ ಇದು ಅಂತಿಮ ಲೆಕ್ಕಾಚಾರವಲ್ಲವೆಂದೂ ಶ್ರೀ ಕ್ಷೇತ್ರದಿಂದ ಅದೆಷ್ಟು ಪ್ರಮಾಣದ ಚಿನ್ನ ಕದ್ದು ಸಾಗಿಸಲಾಗಿದೆಯೆಂಬುವುದರ  ಬಗ್ಗೆ  ಜಂಶದ್‌ಪುರ್‌ನಲ್ಲಿರುವ ನೇಶನಲ್ ಮೆಟಲಜಿಕಲ್  ಲ್ಯಾಬ್‌ನಲ್ಲಿ    ಪರೀಕ್ಷಿಸಲಾಗುತ್ತಿದ್ದು ಅದರ ವರದಿ ಕೈಸೇರಿದ ಬಳಿಕವಷ್ಟೇ ಚಿನ್ನ ನಷ್ಟಗೊಂಡ ಬಗ್ಗೆ ಯಾವುದೇ ಅಂತಿಮ ತೀರ್ಮಾನಕ್ಕೆ ಬರಲು ಸಾಧ್ಯವೆಂದು ಎಸ್‌ಐಟಿ ತಿಳಿಸಿದೆ.

RELATED NEWS

You cannot copy contents of this page