ಪೆರಿಯ: ಪೆರಿಯಾಕ್ಕೆ ಸಮೀಪದ ಕಲ್ಯೋಟ್ನಲ್ಲಿ ರಾಜಕೀಯ ದ್ವೇಷದಿಂದ ಕೊಲೆಗೈಯ್ಯಲ್ಪಟ್ಟ ಯೂತ್ ಕಾಂಗ್ರೆಸ್ ಕಾರ್ಯಕರ್ತರಾದ ಕೃಪೇಶ್ ಮತ್ತು ಶರತ್ಲಾಲ್ರ ಹೆಸರಲ್ಲಿ ಕಲ್ಯೋಟ್ ಪೇಟೆಯಲ್ಲಿ ಸ್ಮಾರಕ ಮಂ ಟಪ ನಿರ್ಮಿಸಲು ಕಾಂಗ್ರೆಸ್ ತೀರ್ಮಾ ನಿಸಿದ್ದು, ಅದರ ಪೂರ್ಣ ವೆಚ್ಚವನ್ನು ಕರ್ನಾಟಕದ ಕಾಂಗ್ರೆಸ್ ಘಟಕವೇ ವಹಿಸಲಿದೆ ಎಂದು ಕರ್ನಾಟಕ ರಾಜ್ಯ ಗೃಹ ಸಚಿವ ಜಿ. ಪರಮೇಶ್ವರ ತಿಳಿಸಿದ್ದಾರೆ.
ಕಾಂಗ್ರೆಸ್ ಜಿಲ್ಲಾ ಸಮಿತಿ ನೇತೃತ್ವದಲ್ಲಿ ಪೆರಿಯಾದಲ್ಲಿ ನಿನ್ನೆ ನಡೆದ ಕೃಪೇಶ್ ಮತ್ತು ಶರತ್ಲಾಲ್ರ ಏಳನೇ ವರ್ಷದ ಸಂಸ್ಮರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಸಚಿವರು ಮಾತನಾಡು ತ್ತಿದ್ದರು. ಕಳೆದ ವರ್ಷ ಇಲ್ಲಿ ನಡೆದ ಶರತ್ಲಾಲ್- ಕೃಪೇಷ್ ಸಂಸ್ಮರಣಾ ದಿನಾಚರಣೆ ಕಾರ್ಯಕ್ರಮದಲ್ಲಿ ಕರ್ನಾಟಕ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಭಾಗವಹಿಸಿ ಸ್ಮಾರಕ ಮಂಟಪದ ನಿರ್ಮಾಣಕ್ಕಾಗಿ ೨೫ ಲಕ್ಷ ರೂ. ನೀಡಿದ್ದರು. ಸ್ಮಾರಕ ಮಂಟಪ ನಿರ್ಮಾಣಕ್ಕೆ ಒಂದು ಕೋಟಿ ರೂ. ವೆಚ್ಚ ನಿರೀಕ್ಷಿಸಲಾಗಿದ್ದು, ಅದನ್ನು ಪೂರ್ಣವಾಗಿ ಕಾಂಗ್ರೆಸ್ನ ಕರ್ನಾಟಕ ಘಟಕವೇ ವಹಿಸಲಿದೆ ಎಂದೂ ಸಚಿವ ಪರಮೇಶ್ವರ್ ತಿಳಿಸಿದರು. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕೇರಳದಲ್ಲಿ ಯುಡಿಎಫ್ ಅಧಿಕಾರಕ್ಕೇರಲಿದೆ ಎಂಬ ನಿರೀಕ್ಷೆಯನ್ನು ಇದೇ ಸಂದರ್ಭದಲ್ಲಿ ಸಚಿವರು ವ್ಯಕ್ತಪಡಿಸಿದರು. ಕಾಂಗ್ರೆಸ್ ಜಿಲ್ಲಾಧ್ಯಕ್ಷ ಪಿ.ಕೆ. ಫೈಸಲ್ ಅಧ್ಯಕ್ಷತೆ ವಹಿಸಿದರು.
ಸಂಸದ ರಾಜ್ಮೋಹನ್ ಉಣ್ಣಿತ್ತಾನ್ ಸಂಸ್ಮರಣಾ ಭಾಷಣ ಮಾಡಿದರು. ಯೂತ್ ಕಾಂಗ್ರೆಸ್ ರಾಜ್ಯ ಅಧ್ಯಕ್ಷ ಒ.ಜೆ. ಜನೀಶ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು. ಕಾಂಗ್ರೆಸ್ನ ಹಲವು ನೇತಾರರು ಭಾಗವಹಿಸಿ ಮಾತನಾಡಿದರು.







