ಪತಿ ಮಸೀದಿಗೆ ತೆರಳಿದ ಸಂದರ್ಭದಲ್ಲಿ ಪತ್ನಿ ನೇಣು ಬಿಗಿದು ಮೃತ್ಯು

ಉಪ್ಪಳ: ಪತಿ ಮಸೀದಿಗೆ ತೆರಳಿದ ಸಮಯದಲ್ಲಿ ಪತ್ನಿ ಫ್ಲ್ಯಾಟ್‌ನಲ್ಲಿ ಫ್ಯಾನ್‌ಗೆ ನೇಣು ಬಿಗಿದು ಆತ್ಮಹತ್ಯೆಗೈದ ಘಟನೆ ನಡೆದಿದೆ. ಉಪ್ಪಳ ಅಲ್ಮಿನಾ ಫ್ಲ್ಯಾಟ್‌ನಲ್ಲಿ ವಾಸಿಸುವ ಮುಹಮ್ಮದ್ ತನ್ಸಿಲ್ ಅಬ್ದುಲ್ ರಶೀದ್‌ರ ಪತ್ನಿ ಅಪ್ಸೀನಾ ಬಾನು (28) ನೇಣು ಬಿಗಿದು ಆತ್ಮಹತ್ಯೆಗೈದ ಸ್ಥಿತಿಯಲ್ಲಿ ಪತ್ತೆಯಾದವರು. ನಿನ್ನೆ ರಾತ್ರಿ 9 ಗಂಟೆಯಿಂದ 10 ಗಂಟೆ ಮಧ್ಯೆ ಘಟನೆ ನಡೆದಿದೆ. ಪತಿ ನಮಾಜಿಗೆಂದು ಮಸೀದಿಗೆ ಹೋಗಿದ್ದರು. ಹಿಂತಿರುಗಿದಾಗ ಪತ್ನಿ ಮಲಗುವ ಕೊಠಡಿಯಲ್ಲಿ ಫ್ಯಾನ್‌ಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ತಂದೆಯ ಸಹೋದರನ ದೂರಿನಂತೆ ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದಾರೆ.

You cannot copy contents of this page