ನಿವೃತ್ತ ಡೆಪ್ಯುಟಿ ಕಲೆಕ್ಟರ್ ಜಿ.ಕೆ. ಶೆಟ್ಟಿ ನಿಧನ

ಕಾಸರಗೋಡು: ನಿವೃತ್ತ ಡೆಪ್ಯುಟಿ ಕಲೆಕ್ಟರ್, ಕಾಸರಗೋಡು ಜಿಲ್ಲಾ ಕ್ರಿಕೆಟ್ ಅಸೋಸಿಯೇಶನ್ ಸ್ಥಾಪಕ ಅಧ್ಯಕ್ಷ, ರಾಜ್ಯ ಕಾರ್ಯದರ್ಶಿ ಹಾಗೂ ಕೇರಳ ಕ್ರಿಕೆಟ್ ಅಸೋಸಿಯೇಶನ್ ಸೆಲೆಕ್ಷನ್ ಸಮಿತಿ ಸದಸ್ಯನಾಗಿದ್ದ ಎಚ್. ಗೋಪಾಲಕೃಷ್ಣ ಶೆಟ್ಟಿ ಎಂಬ ಜಿ.ಕೆ. ಶೆಟ್ಟಿ (80) ನಿಧನ ಹೊಂದಿದರು. ಕಾಸರಗೋಡು ಕೇಳುಗುಡ್ಡೆಯ ಗಿರಿಜ ನಿವಾಸದಲ್ಲಿ ಅಂತ್ಯ ಸಂಭವಿಸಿದೆ. ಕಾಸರಗೋಡು ಯವನಿಕ ಅಧ್ಯಕ್ಷ, ಬಂಟ್ಸ್ ಸಂಘದ ಜಿಲ್ಲಾಧ್ಯಕ್ಷ, ಕಾರ್ಯದರ್ಶಿ, ಆಲಪ್ಪುಳ, ಇಡುಕ್ಕಿ ಜಿಲ್ಲೆಗಳಲ್ಲಿ ಡೆಪ್ಯುಟಿ ಕಲೆಕ್ಟರ್ ಆಗಿ ಸೇವೆ ಸಲ್ಲಿಸಿದ್ದರು. ಇವರ ಪತ್ನಿ ಗೀತ ಈ ಹಿಂದೆ ನಿಧನ ಹೊಂದಿದ್ದಾರೆ.

ಮೃತರು ಮಕ್ಕಳಾದ ಗಣೇಶ್ ಶೆಟ್ಟಿ, ಚಿತ್ರಲೇಖ ಎಸ್.ಆಳ್ವ, ಅಳಿಯ ಪ್ರಣವ್ ಶೆಟ್ಟಿ, ಸೊಸೆ ಅನಿತ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಓರ್ವ ಪುತ್ರ ಆನಂದ ಶೆಟ್ಟಿ ಈ ಹಿಂದೆ ನಿಧನ ಹೊಂದಿದ್ದಾರೆ.

You cannot copy contents of this page