ರಾಜ್ಯದ ಮೊತ್ತಮೊದಲ ಬ್ಯಾಟರಿ ಎನರ್ಜಿ ಸ್ಟೋರೇಜ್ ಸಿಸ್ಟಂ ಕಾಸರಗೋಡಿನಲ್ಲಿ: ಫೆ. 28ರಂದು ಸಚಿವರಿಂದ ಶಿಲಾನ್ಯಾಸ

ಕಾಸರಗೋಡು: ರಾಜ್ಯದಲ್ಲಿ ಇದೇ ಪ್ರಥಮವೆಂಬಂತೆ ಬ್ಯಾಟರಿ ಎನರ್ಜಿ ಸ್ಟೋರೇಜ್ ಸಿಸ್ಟಂ ಕಾಸರಗೋಡಿನಲ್ಲಿ ಸ್ಥಾಪಿಸಲಾಗು ವುದು. ಮೈಲಾಟಿಯಲ್ಲಿ ಇದನ್ನು ಸ್ಥಾಪಿಸಲು ತೀರ್ಮಾನಿಸಲಾಗಿದೆ.  ಫೆ. 28ರಂದು ಅಪರಾಹ್ನ 3ಗಂಟೆಗೆ ನಡೆಯುವ ಕಾರ್ಯಕ್ರಮದಲ್ಲಿ ರಾಜ್ಯ ವಿದ್ಯುತ್ ಖಾತೆ ಸಚಿವ ಕೆ. ಕೃಷ್ಣನ್ ಕುಟ್ಟಿ ಶಿಲಾನ್ಯಾಸ ನೆರವೇರಿಸುವರು. 

ಮೈಲಾಟಿಯಲ್ಲಿರುವ ರಾಜ್ಯ ವಿದ್ಯುನ್ಮಂಡಳಿಯ 220 ಕೆವಿ ವಿದ್ಯುತ್ ಸಬ್ ಸ್ಟೇಶನ್‌ನ ಆವರಣದೊಳಗೆ ಈ 125 ಮೆಘಾವಾಟ್ ಸಾಮರ್ಥ್ಯದ ಬ್ಯಾಟರಿ ಎನರ್ಜಿ ಸ್ಟೋರೇಜ್ ಸಿಸ್ಟಂ ನಿರ್ಮಿಸಲಾಗುವುದು. ಹಗಲಿನ ವೇಳೆ  ವಿದ್ಯುತ್‌ನ್ನು  ಈ ಸ್ಟೋರೇಜ್‌ನಲ್ಲಿ ದಾಸ್ತಾನಿರಿಸಿ ರಾತ್ರಿ ವಿದ್ಯುತ್ ಬಳಕೆ ಅತೀ ಹೆಚ್ಚಿರುವ ವೇಳೆಯಲ್ಲಿ  ಓಲ್ಟೇಜ್ ಸಮಸ್ಯೆ ಉಂಟಾಗದಿರಲು ಈ ಸ್ಟೋರೇಜ್‌ನಿಂದ ಅಗತ್ಯದಷ್ಟು ವಿದ್ಯುತ್ ಪೂರೈಸಲಾಗುವುದು.  ದೈನಂದಿನ ಗರಿಷ್ಠ ೫ ಲಕ್ಷ ಯೂನಿಟ್‌ನಷ್ಟು ವಿದ್ಯುತ್‌ನ್ನು ಪೀಕ್ ಸಮಯದಲ್ಲಿ ಈ ಸ್ಟೋರೇಜ್‌ನಿಂದ ಗ್ರೀಡ್‌ಗಳಿಗೆ ಪೂರೈಸಲಾಗುವುದು.

ಇದರ ನಿರ್ಮಾಣ ಕೆಲಸ ಅಕ್ಟೋಬರ್‌ನಲ್ಲಿ ಪೂರ್ತೀಕರಿಸುವ ಯೋಜನೆ ಹಾಕಿಕೊಳ್ಳಲಾಗಿದೆ. ಕೇರಳದಲ್ಲಿ ಸೌರ ವಿದ್ಯುತ್ ಹಬ್ ಆಗಿ ಕಾಸರಗೋಡನ್ನು ಭಡ್ತಿಗೊಳಿ ಸುವ ಯೋಜನೆ ಇನ್ನೊಂದೆಡೆ ರಾಜ್ಯ ಸರಕಾರ ಹಾಕಿಕಂಡಿದ್ದು, ಸೌರ ವಿದ್ಯುತ್ ಸ್ಥಾವರಗಳಿಂದ ಉತ್ಪಾದಿಸಲಾಗುವ ಹೆಚ್ಚುವರಿ ವಿದ್ಯುತ್‌ನ್ನು ಈ ಬ್ಯಾಟರಿ ಎನರ್ಜಿ ಸ್ಟೋರೇಜ್ ಸಿಸ್ಟಂನಲ್ಲಿ ದಾಸ್ತಾನು ಇರಿಸಿ ಅಗತ್ಯದ ವೇಳೆ ಅದನ್ನು ಉಪಯೋಗಿಸಲಾಗುವುದೆಂದು ಸಂಬಂಧಪಟ್ಟವರು ತಿಳಿಸಿದ್ದಾರೆ.

RELATED NEWS

You cannot copy contents of this page