ಹೊಸದುರ್ಗ: ಚಂದೇರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವಾಸಿಸುವ 16ರ ಹರೆಯದ ಬಾಲಕಿಗೆ ದೌರ್ಜನ್ಯಗೈದಿರುವುದಾಗಿ ದೂರಲಾಗಿದೆ. ಘಟನೆಯಲ್ಲಿ 15ರ ಬಾಲಕ ಸಹಿತ ೫ ಮಂದಿ ವಿರುದ್ಧ ಚಂದೇರ ಪೊಲೀಸರು ಕೇಸು ದಾಖಲಿಸಿದ್ದಾರೆ. ಇವರಲ್ಲಿ ಇಬ್ಬರನ್ನು ಪೊಲೀಸರು ಕಸ್ಟಡಿಗೆ ತೆಗೆದಿದ್ದಾರೆ. ಕೋಳಿ ಅಂಗಡಿ ನೌಕರನಾದ ವಯಕ್ಕರ ಪೋತ್ತಂಕಂಡ ನಿವಾಸಿ ನೌಶಾದ್, ತೃಕರಿಪುರದ ಫಾಯಿಸ್ ಎಂಬಿವರನ್ನು ಸೆರೆ ಹಿಡಿಯಲಾಗಿದೆ. ಇವರನ್ನು ಸಮಗ್ರವಾಗಿ ತನಿಖೆಗೊಳ ಪಡಿಸಲಾಗುವುದು. ವೈದ್ಯಕೀಯ ತಪಾಸಣೆಗೊಳಪಡಿಸಿದ ಬಳಿಕ ನ್ಯಾಯಾಲಯಕ್ಕೆ ಹಾಜರುಪಡಿಸ ಲಾಗುವುದು.
ತೃಕರಿಪುರದ ರಾಶಿದ್, ಉದಿನೂರು ವಿಲ್ಲೇಜ್ನಲ್ಲಿ ವಾಸವಾ ಗಿರುವ 15ರ ಬಾಲಕ, ಬಾಲಕಿಯ ಸಹೋದರಿಯ ಪತಿಯಾದ 45ರ ವ್ಯಕ್ತಿ ಎಂಬೀ ಮೂರು ಮಂದಿ ಕೂಡಾ ಆರೋಪಿಗಳಾಗಿದ್ದಾರೆ. ಇವರಲ್ಲಿ ರಾಶಿದ್ ಪ್ರಸ್ತುತ ದುಬಾಯಿಯಲ್ಲಿರುವುದಾಗಿಯೂ ಪೊಲೀಸರು ತಿಳಿಸಿದ್ದಾರೆ. ಸಹೋ ದರಿಯ ಪತಿಯಾದ ೪೫ರ ವ್ಯಕ್ತಿ ಅಸೌಖ್ಯ ತಗಲಿ ಇತ್ತೀಚೆಗೆ ನಿಧನ ಹೊಂದಿದ್ದರು. ಒಂದು ವರ್ಷದೊಳಗೆ ವಿವಿಧ ಸಮಯಗಳಲ್ಲಿ ಈ ಬಾಲಕಿ ಲೈಂಗಿಕ ದೌರ್ಜನ್ಯಕ್ಕೆ ತುತ್ತಾಗಿರು ವುದಾಗಿ ಹೇಳಲಾಗಿದೆ.







