ಬಿದ್ದು ಸಿಕ್ಕಿದ ಒಂದೂವರೆ ಪವನ್ ತೂಕದ ಚಿನ್ನದ ಕಾಲ್ಗೆಜ್ಜೆ ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದ ಇಲ್ಯಾಸ್

ಕುಂಬಳೆ: ಆರಿಕ್ಕಾಡಿಯಲ್ಲಿ ಬಿದ್ದು ಸಿಕ್ಕಿದ 2 ಲಕ್ಷ ರೂ. ಮೌಲ್ಯದ ಚಿನ್ನದ ಕಾಲ್ಗೆಜ್ಜೆಯನ್ನು ಕೋಟೆಕಾರಿನ ಇಲೆಕ್ಟ್ರೀಶ್ಯನ್ ಇಲ್ಯಾಸ್ ವಾರೀಸುದಾರರನ್ನು ಪತ್ತೆಹಚ್ಚಿ ಹಿಂತಿರುಗಿಸಿದರು. ಇಲ್ಯಾಸ್‌ನ ಈ ಮಾದರಿ ಕೆಲಸವನ್ನು ಸ್ಥಳೀಯರು ಪ್ರಶಂಶಿಸಿದ್ದಾರೆ. ಆರಿಕ್ಕಾಡಿಯ ಇನ್ನೋರ್ವ ಸಮಾಜಸೇವಕ ರಫೀಕ್ ಅಬ್ಬಾಸ್‌ರ ಸಹೋದರಿಯ ಒಂದೂವರೆ ಪವನ್ ತೂಕದ ಕಾಲ್ಗೆಜ್ಜೆ ವಾರಗಳ ಹಿಂದೆ ಆರಿಕ್ಕಾಡಿಯಲ್ಲಿ ಕಳೆದುಹೋಗಿತ್ತು. ಮನೆಯವರು ಎಲ್ಲಾ ಕಡೆ ಹುಡುಕಿಯೂ ಪತ್ತೆಹಚ್ಚಲು ಸಾಧ್ಯವಾಗಿರಲಿಲ್ಲ.

ಈ ಮಧ್ಯೆ ಬೀದಿ ದೀಪ ದುರಸ್ತಿಗೆಂದು ಇಲ್ಯಾಸ್ ಆರಿಕ್ಕಾಡಿಗೆ ತಲುಪಿದ್ದರು. ದಾರಿ ಮಧ್ಯೆ ಹೊಳೆಯುತ್ತಿರುವ ಕಾಲ್ಗೆಜ್ಜೆಯನ್ನು ನೋಡಿ ಇಲ್ಯಾಸ್ ತೆಗೆದುಕೊಂಡರು. ಬಳಿಕ ಅದನ್ನು ಕುಂಬಳೆಯ ಜ್ಯುವೆಲ್ಲರಿಯೊಂದರಲ್ಲಿ ಪರಿಶೀಲಿಸಿದಾಗ ಚಿನ್ನದ ಕಾಲ್ಗೆಜ್ಜೆ ಎಂದು ಖಚಿತಗೊಂ ಡಿತು. ಆಮೇಲೆ ಸಮಾಜಸೇವಕ ಬಿ.ಎ. ರಹ್ಮಾನ್‌ರಿಗೆ ಮಾಹಿತಿ ನೀಡಿ ಸಾಮಾಜಿಕ ಜಾಲತಾಣಗಳಲ್ಲಿ ಈ ಬಗ್ಗೆ ಮಾಹಿತಿ ಹಂಚಲಾಯಿತು. ಇದರಿಂದ ಕಳೆದುಹೋಗಿದ್ದ ಕಾಲ್ಗೆಜ್ಜೆಯ ವಾರೀಸುದಾರರಿಗೆ ಮಾಹಿತಿ ತಿಳಿದಿದ್ದು ಅವರು ಸಂಪರ್ಕಿಸಿದರು. ಬಳಿಕ ಕಾಲ್ಗೆಜ್ಜೆಯನ್ನು ಇಲ್ಯಾಸ್ ಅವರಿಗೆ ಹಸ್ತಾಂತರಿಸಿದ್ದಾರೆ. ಉತ್ತಮ ಕ್ರಿಕೆಟ್ ಪಟುವಾಗಿರುವ ಇಲ್ಯಾಸ್‌ರ ಈ ಪ್ರಮಾಣಿಕತೆಗೆ ಸ್ಥಳೀಯರು ಅಭಿನಂದಿಸಿದ್ದಾರೆ.

RELATED NEWS

You cannot copy contents of this page